ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಾಧನೆ

brinobrain
Published on

ಮಡಿಕೇರಿ: ಬ್ರೈನೋಬ್ರೈನ್ ಇಂಟರ್ ನ್ಯಾಷನಲ್ ದುಬೈ ಸಂಸ್ಥೆಯ ವತಿಯಿಂದ ಚೆನ್ನೈನಲ್ಲಿ ನಡೆದ ೪೬ನೇ ರಾಷ್ಟ್ರ ಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ-೨೦೨೫ರಲ್ಲಿ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದಿಂದ ಭಾಗವಹಿಸಿದ್ದ ಎಲ್ಲಾ ೨೮ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ವಿಜೇತರಾಗಿದ್ದು, ೧೮ ಚಾಂಪಿಯನ್ ಟ್ರೋಫಿ, ೭ ಚಿನ್ನದ ಪದಕ ಮತ್ತು ೩ ಬೆಳ್ಳಿಯ ಪದಕಗಳನ್ನು ಗೆದ್ದಿದ್ದಾರೆ.

ಚೆನ್ನೈನ ಚೆನ್ನೈ ಟ್ರೇಡ್ ಸೆಂಟರ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರ ನೇತೃತ್ವದಲ್ಲಿ ಒಟ್ಟು ೨೮ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಭಾರತದ ೩೪೦ ಕೇಂದ್ರಗಳಿಂದ ಒಟ್ಟು ೮೦೦೦ ಮಕ್ಕಳು ಭಾಗವಹಿಸಿದ್ದು, ಕೇವಲ ೩ ನಿಮಿಷದಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಅತೀ ಚುರುಕಾಗಿ ಮಾಡುವ ಮೂಲಕ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ ೨೮ವಿದ್ಯಾರ್ಥಿಗಳು ಪದಕಗಳನ್ನು ತಮ್ಮದಾಗಿಸಿಕೊಂಡರು.

ಚಾಂಪಿಯನ್ ಟ್ರೋಫಿ ವಿಜೇತರು: ನಿಲ್ಹಾ ಜೆ.ತಾರಕನ್, ಐಡೆನ್ ಜೆ.ತಾರಕನ್, ಎಂ.ಕೆ.ಹರ್ಷಿಣಿ, ಲಿವ್ಯ ಸುನಿತ್ ಕುಮಾರ್, ಕೆ.ಸಿ.ಆರಾಧ್ಯ, ದ್ರುಪದ್.ಪಿ.ಮಣಿಕೋಥ್, ಜಾರ್ಜ್ ಮ್ಯಾಥಿವ್, ನಮನ್ ಎಂ.ಗೌಡ, ಕೆ.ಎಲ್.ಲಿಖಿತ್ ಸೋಮಣ್ಣ, ಎಸ್.ಅನ್ವಿತ್, ಕೆ.ಸಿ.ಆರುಷಿ, ವೈ.ಬಿ.ದಿಯ, ಎ.ಪಿ.ಜೆಶ್ವಿತ ತಂಗಮ್ಮ, ಎಸ್.ಕೆ.ಸಮರ್ಥ್ ಗಣಪತಿ, ಶ್ರೀಹಾನ್ ಸಂಜಯ್ ಜಿತ್ತಿ, ಬಿ.ಆರ್.ಲಾಕ್ಷಿತ, ಬಿ.ಎಲ್.ಪ್ರಥಮ್ ಚಿಣ್ಣಪ್ಪ, ಕೆ.ಎಂ.ವಂಶಿ ಚಾಂಪಿಯನ್ ಟ್ರೋಫಿ ಪಡೆದರು.

ಚಿನ್ನದ ಪದಕ ವಿಜೇತರು: ಕನಿಷಾ ಸುನಿತ್ ಕುಮಾರ್, ಬಿ.ಡಿ.ರಿಯಾನ್ ಪೊನ್ನಪ್ಪ, ಎ.ಆರ್.ಆಲುಫ್, ಮಿಯ ಅರುಣ್, ಎಸ್.ಕೆ.ಪರಾಗ್ ದೇವಯ್ಯ, ಎನ್.ದೀಕ್ಷ ಭರತ್, ಬಿ.ಆರ್,ಶಾನ್ ಪ್ರಥಮ್ ಚಿನ್ನದ ಪದಕ ಪಡೆದರೆ, ಎ.ಎಲ್.ಪರೀಕ್ಷ, ಜೋನ್ನಾ ಮಡ್ತಾ, ಕೆ.ಎಂ.ನಿಂಶಿ ಬೆಳ್ಳಿ ಪದಕ ಪಡೆದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಂ, ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಮಣ್ಯಂ ಹಾಗೂ ಎಲ್ಲಾ ರಾಜ್ಯದ ಸ್ಥಳೀಯ ವ್ಯವಸ್ಥಾಪಕ ನಿರ್ದೇಶಕರುಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net