ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಸಾಧನೆ

10vittal1
Published on

ಬೆಳಗಾವಿ: ತಾಲೂಕಿನ ಮುತ್ನಾಳ ಗ್ರಾಮದಲ್ಲಿ ಈಚೆಗೆ ನಡೆದ ಭೆಂಡಿಗೇರಿ ಕ್ಲಸ್ಟರ್​ ಮಟ್ಟದ ಕ್ರೀಡಾಕೂಟದಲ್ಲಿ ಭೆಂಡಿಗೇರಿ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

ಬಾಲಕಿಯರ ವಿಭಾಗ: ಖೋ ಖೋ, ವಾಲಿಬಾಲ್​ನಲ್ಲಿ ಪ್ರಥಮ, 4*100 ಮೀ ರಿಲೇಯಲ್ಲಿ ದ್ವೀತಿಯ ಸ್ಥಾನ. 80 ಮೀ ಹರ್ಡಲ್ಸ್​ನಲ್ಲಿ ನಾಗವೀಣಾ ಕುಂಬಾರ ಪ್ರಥಮ, 200 ಮೀ ಓಟದಲ್ಲಿ ತೇಜಸ್ವಿನಿ ಬನ್ನಿಗಿಡದ ಪ್ರಥಮ, ಹರ್ಡಲ್ಸ್​ನಲ್ಲಿ ತೃತೀಯ ಸ್ಥಾನ. 600 ಮೀ ಓಟದಲ್ಲಿ ಸೃಷ್ಟಿ ಅಗಸಗಿ ಪ್ರಥಮ, ಖುಷಿ ಕುಡಚಿ ದ್ವೀತಿಯ, 400 ಮೀ ಓಟದಲ್ಲಿ ಕಾವೇರಿ ಗೌಡರ ಪ್ರಥಮ, ಶ್ರೇಯಾ ಪವಾರ ದ್ವೀತಿಯ ಸ್ಥಾನ ಪಡೆದಿದ್ದಾರೆ.

ಬಾಲಕರ ವಿಭಾಗ: ಖೋ ಖೋ, ಥ್ರೋ ಬಾಲ್​ನಲ್ಲಿ ಪ್ರಥಮ, 4*100 ರಿಲೇಯಲ್ಲಿ ದ್ವೀತಿಯ ಸ್ಥಾನ. 80 ಮೀ ಹರ್ಡಲ್ಸ್​ನಲ್ಲಿ ಸಂತೋಷ ಕುರುಬರ ಪ್ರಥಮ, 400 ಮೀ ಓಟ, ಎತ್ತರ ಜಿಗಿತದಲ್ಲಿ ಸಮರ್ಥ ರಾಯಣ್ಣವರ ದ್ವೀತಿಯ. 600 ಮೀ ಓಟದಲ್ಲಿ ಸಂದೇಶ ಡಾಂಗೆ ಪ್ರಥಮ, ಗಂಗಾಧರ ಡಬ್ಬು ದ್ವೀತಿಯ, 400 ಮೀ ಓಟದಲ್ಲಿ ನಾಗರಾಜ ವಾಗರವಾಡಿ ಪ್ರಥಮ, ಅಭಿಷೇಕ ೂಡ್ಸೆ ದ್ವೀತಿಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮಕ್ಕಳನ್ನು ಚೆನ್ನಾಗಿ ತರಬೇತುಗೊಳಿಸಿದ ದೈಹಿಕ ಶಿಕ್ಷಣ ಶಿಕ್ಷಕ ಜಿ.ಸಿ.ಮುದಿಗೌಡರ ಅವರ ಕಾಯಕ್ಕೆ ಹಾಗೂ ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಶಿಕ್ಷಕರು, ಹಳೇ ವಿದ್ಯಾರ್ಥಿಗಳ ಸಂದ ಪದಾಧಿಕಾರಿಗಳು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net