

ಚಿಕ್ಕಮಗಳೂರು: ವಿದ್ಯಾರ್ಥಿಗಳು ಸಂಸ್ಕಾರವAತರಾದಾಗ ಮಾತ್ರ ಭಾರತ ದೇಶದ ಸಂಸ್ಕೃತಿ ಪರಂಪರೆಗೆ ಅರ್ಥ ಬರುತ್ತದೆ ಎಂದು ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಅಭಿಪ್ರಾಯಪಟ್ಟರು.
ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಶುಕ್ರವಾರ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ತೇಗೂರಿನ ಮುರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜು ಹಾಗೂ ಚಿಕ್ಕಮಗಳೂರು ಪದವಿ ಪೂರ್ವ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ಸಾಹದಿಂದ ಭಾಗವಹಿಸಿರುವುದು ಸಂತಸ ತಂದಿದೆ. ಇದನ್ನು ನೋಡಿದಾಗ ನಮ್ಮ ಶಾಲಾ-ಕಾಲೇಜಿನ ವ್ಯಾಸಂಗದ ದಿನಗಳು ನೆನಪಿಗೆ ಬರುತ್ತದೆ. ಎಲ್ಲರೂ ಗೆಲ್ಲುತ್ತೇವೆಂಬ ಭಾವನೆಯಿಂದ ಕ್ರೀಡೆಯಲ್ಲಿ ಭಾಗವಹಿಸಿದ್ದು, ಸೋತವರು ದೃತಿಗೆಡದೆ ಮುಂದೆ ಯಶಸ್ಸು ಗಳಿಸುತ್ತೇವೆಂಬ ಆಶಾಭಾವನೆ ಹೊಂದಬೇಕು ಎಂದರು.
ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಜಿಲ್ಲೆ, ರಾಜ್ಯ, ದೇಶಕ್ಕೆ ಒಳ್ಳೆಯ ಕೀರ್ತಿ ತರಬೇಕು. ಒಲಂಪಿಕ್ ಕ್ರೀಡಾಕೂಟದಲ್ಲಿ ಚಿನ್ನ, ಬೆಳ್ಳಿ ಪದಕವನ್ನು ತಂದು ಭಾರತ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಕ್ರೀಡಾಪಟುಗಳಂತೆ ನೀವೂ ಸಹ ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.
ಪಾಲಕರ ಆಸೆಯಂತೆ ಪಠ್ಯ ಚಟುವಟಿಕೆಗೆ ಪ್ರಥಮ ಆದ್ಯತೆ ನೀಡುವ ಜೊತೆಗೆ ದೇಶಪ್ರೇಮ, ಸಂಸ್ಕೃತಿ ಮರೆಯಬಾರದು. ವಿದ್ಯಾರ್ಥಿನಿಯರು ಮಾದಕ ವ್ಯಸನ ವ್ಯಕ್ತಿಗಳಿಂದ ದೂರ ಇರಬೇಕು ಎಂದು ಕಿವಿಮಾತು ಹೇಳಿದರು.
ಪಿಯು ಮಂಡಳಿ ಉಪನಿರ್ದೇಶಕ ಪುಟ್ಟನಾಯಕ್ ಮಾತನಾಡಿ, ದೇಶಕ್ಕೆ ರೈತರು ಕೃಷಿಯಲ್ಲಿ ಬೆನ್ನೆಲುಬಾಗಿದ್ದರೆ ಅದೇ ರೀತಿ ಕ್ರೀಡಾ ಚಟುವಟಿಕೆಯಲ್ಲಿ ಕ್ರೀಡಾ ಶಿಕ್ಷಕರು ಬೆನ್ನೆಲೆಬಾಗಿದ್ದಾರೆ. ಕ್ರೀಡೆಗಳು ಸುಗಮ, ಸುಲಲಿತವಾಗಿ ನಡೆಯಬೇಕಾದರೆ ಕ್ರೀಡಾ ಶಿಕ್ಷಕರ ಶ್ರಮ ಮುಖ್ಯಎಂದರು.
ಕ್ರೀಡೆಗಳು ಹಾಗೂ ಕ್ರೀಡಾಪಟುಗಳು ದೇಶದ ಭಾವೈಕ್ಯತೆಯ ಸಂಕೇತ. ಕ್ರೀಡೆಗೆ ಎಲ್ಲಿ ಉತ್ಸಾಹ, ಪ್ರೋತ್ಸಾಹ ದೊರೆಯುತ್ತದೆಯೋ ಅಲ್ಲಿ ಭಾವೈಕ್ಯತೆ ಸಮ್ಮಿಲನವಾಗುತ್ತದೆ ಎಂದು ತಿಳಿಸಿದರು.
ಕ್ರೀಡೆ ಶಿಕ್ಷಣದ ಒಂದು ಭಾಗವಾಗಿದ್ದು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಭಾಗವಹಿಸುವ ಮೂಲಕ ರಾಜ್ಯ, ರಾಷ್ಟçಮಟ್ಟಕ್ಕೆ ಆಯ್ಕೆಯಾಗಬೇಕು ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು. ಸೋತವರು ದೃತಿಗೆಡದೆ ಮುಂದೆ ಅವಕಾಶ ಬರುತ್ತದೆ ಎಂಬ ಸಂಕಲ್ಪದೊAದಿಗೆ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಿಳಿಸಿದರು.
ಸೆ. ೧೩, ೧೪ ರಂದು ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಆಯೋಜನೆ ಮಾಡುತ್ತಿದ್ದು, ಸೆ.೧೩ ರಂದು ಇದೇ ಆಟದ ಮೈದಾನದಲ್ಲಿ ಹಾಗೂ ಸೆ.೧೪ ರಂದು ರಾಮನಹಳ್ಳಿಯ ಪೊಲೀಸ್ ಆಟದ ಮೈದಾನದಲ್ಲಿ ಕ್ರೀಡಾಕೂಟ ನಡೆಯಲಿರ. ಇಲ್ಲಿ ಭಾಗವಹಿಸಿರುವ ಎಲ್ಲಾ ಕ್ರೀಡಾಪಟುಗಳು ಜಿಲ್ಲಾಮಟ್ಟದ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯರ ಸಂಘದ ಅಧ್ಯಕ್ಷೆ ತಸ್ಸೀಮಾ ಭಾನು, ಪ್ರಾಚಾರ್ಯ ರುದ್ರಯ್ಯ, ಪ್ರಮುಖರಾದ ವಿಜಯಕುಮಾರ್, ಶೃತಿ, ಲತಾಮಣಿ ಉಪಸ್ಥಿತರಿದ್ದರು.