

ಕಾಸರಗೋಡು: ವಿದ್ಯಾರ್ಥಿಗಳನ್ನು ಉತ್ತಮ ಭವಿಷ್ಯದತ್ತ, ಸರಿಯಾದ ದಿಕ್ಕಿನತ್ತ ನಡೆಸುವಲ್ಲಿ ಎನ್ನೆಸ್ಸೆಸ್ ಸಹಕಾರಿ ಎಂದು ಶ್ರೀ ಸಾಯಿ ನಿಕೇತನ ಸೇವಾ ಸಂಸ್ಥೆಯ ಮುಖ್ಯಸ್ಥ ಡಾ.ಉದಯ್ ಕುಮಾರ್ ನೂಜಿ ಹೇಳಿದರು.
ಶ್ರೀ ಸಾಯಿನಿಕೇತನ ಸೇವಾಶ್ರಮ ಸಂಸ್ಥೆಗೆ ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲಾ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಭೇಟಿ ನೀಡಿದ ಸಂದರ್ಭ ಮಾತನಾಡಿದರು.
ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ರಾಜೇಂದ್ರನ್, ಶ್ರೀಸಾಯಿನಿಕೇತನ ಸಂಸ್ಥೆಯ ಕೋಶಾಧಿಕಾರಿ ಡಾ.ಶಾರದಾ ಉಪಸ್ಥಿತರಿದ್ದರು. ಎನ್ನೆಸ್ಸೆಸ್ ವಿದ್ಯಾರ್ಥಿ ವಿಭಾಗದ ನಾಯಕ ಅಬ್ದುಲ್ ಅರ್ಫಾಜ್, ವಿದ್ಯಾರ್ಥಿನಿಯರ ವಿಭಾಗದ ನಾಯಕಿ ನಂದನ ನೇತೃತ್ವ ವಹಿಸಿದ್ದರು.
48 ವಿದ್ಯಾರ್ಥಿಗಳು ಶ್ರಮದಾನ ಹಾಗೂ ಇನ್ನಿತರ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ನೃತ್ಯ, ಹಾಡು ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.