ಶಾಂತಿಸದನ ಶಾಲೆ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

21 Dwd 6
Published on

ಧಾರವಾಡ: ಕೋಲಾರದ ಕನಕ ಬಾಸ್ಕೆಟ್‌ಬಾಲ್ ಮೈದಾನದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ 14 ವರ್ಷದೊಳಗಿನ ಬಾಲಕರ ಬಾಸ್ಕೆಟ್‌ಬಾಲ್  ಪಂದ್ಯಾವಳಿಯಲ್ಲಿ ಬೆಳಗಾವಿ ವಿಭಾಗವನ್ನು ಪ್ರತಿನಿಧಿಸಿದ್ದ ನಗರದ ಶಾಂತಿಸದನ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬೆಳಗಾವಿ ವಿಭಾಗ ಪ್ರತಿನಿಧಿಸಿದ್ದ ವಿದ್ಯಾರ್ಥಿಗಳು ಕಲಬುರಗಿ ವಿಭಾಗವನ್ನು 49- 16, ಮೈಸೂರು ವಿಭಾಗವನ್ನು 42- 35 ಅಂಕ ಹಾಗೂ ೈನಲ್‌ನಲ್ಲಿ ಬೆಂಗಳೂರು ವಿಭಾಗದ ಕ್ರೀಡಾಪಟುಗಳನ್ನು 35- 28 ಅಂಕಗಳಿಂದ ಮಣಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ  ಆಯೆಯಾಗಿದ್ದಾರೆ.
ಶಾಲೆಯ ಪ್ರೀತಂ ಗುರಲಕಟ್ಟಿ, ಸಮರ್ಥ ಹುಬ್ಬಳ್ಳಿ, ಅಶೋಕ ಮಳಿಮಠ, ಭೀಮಪ್ಪ ಬಸಾಪುರ, ಅಂಪಲಿ ಚಕ್ರಧರ್, ವಿನಾಯಕ ಹಿರೇಮಠ ತಂಡದಲ್ಲಿದ್ದರು. ಡಿಸೆಂಬರ್‌ನಲ್ಲಿ ಛತ್ತೀಸಗಢದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಈ ತಂಡ ಕರ್ನಾಟಕವನ್ನು ಪ್ರತಿನಿಧಿಸಲಿದೆ.
ವಿದ್ಯಾರ್ಥಿಗಳನ್ನು ಶಾಂತಿಸದನ ಪ್ರೌಢಶಾಲೆಯ ಆಡಳಿತ ಮಂಡಳಿಯ ಸಿಸ್ಟರ್ ಾತಿಮಾ ರ್ನಾಂಡೀಸ್, ಮುಖ್ಯಾಧ್ಯಾಪಕಿ ಸಿಸ್ಟರ್ ನಥಾಲಿಯಾ ಭರೆಟ್ಟೋ, ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಪಟ್ಟಣದವರ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net