

ಐಮಂಗಲ: ಮರಡಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಬುರುಜಿನರೊಪ್ಪ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪಾಲವ್ವನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ವಿಭಾಗದಲ್ಲಿ ವಿಜೇತರಾಗಿದ್ದಾರೆ.
ಹಿಂದಿ ಭಾಷಣ: ಎಲ್.ಭೂಮಿಕಾ, ಚರ್ಚಾ ಸ್ಪರ್ಧೆ: ಜಿ.ಆರ್.ರಮ್ಯಾ, ಭರತನಾಟ್ಯ: ಎಸ್.ಶಮೀನಾ, ಭಾವಗೀತೆ: ಜೈತುಂಬಿ, ಗಜಲ್: ನಾಜೀಯ ಕೌಸರ್, ಧಾರ್ಮಿಕ ಪಠಣ ಸಂಸ್ಕೃತ: ಜಿ.ಎಂ.ಸಂಜನಾ, ಧಾರ್ಮಿಕ ಪಠಣ ಅರೇಬಿಕ: ಎಚ್.ಗೌಸಿಯಾ, ಮಿಮಿಕ್ರಿ: ಸಿ.ಎಸ್.ಗಗನ್‌ದೀಪ್ ಪ್ರಥಮ ಸ್ಥಾನ ಪಡೆಡಿದ್ದಾರೆ.
ಗುಂಪು ಸ್ಪರ್ಧೆಯ ಕವನ ವಾಚನ: ಜಿ.ಆರ್.ರಮ್ಯಾ, ಜಿ.ಎನ್.ರಶ್ಮಿ, ಕವ್ವಾಲಿ: ಗೌಸೀಯಾ, ವರ್ಷಿತಾ, ಭೂಮಿಕಾ, ಶಮೀನಾ, ಸ್ನೇಹಾ, ಜೈತುಂಬಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯಶಿಕ್ಷಕ ಎಚ್.ಬಿ.ರವಿ ತಿಳಿಸಿದ್ದಾರೆ.