

ನರಗುಂದ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅವಿರತ ಶ್ರಮದಿಂದ ಜೂ.೨೧ ರಂದು ಅಂತಾರಾಷ್ಟಿçÃಯ ಯೋಗ ದಿನ ಆಚರಿಸಲು ಸಾಧ್ಯವಾಯಿತು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಲಯನ್ಸ್ ಕ್ಲಬ್, ಪುರಸಭೆ ಹಾಗೂ ತಾಲೂಕಾಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟಿçÃಯ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.
`ಅಮೆರಿಕಾದ ಶ್ವೇತ ಭವನದಲ್ಲಿ ಮುಕ್ತ ಪ್ರವೇಶ ಹೊಂದಿ, ೧೮೦ ರಾಷ್ಟçಗಳಲ್ಲಿ ಸಂಗೀತದ ಕಛೇರಿಗಳನ್ನು ನಡೆಸಿ ಸಂಗೀತ ಕ್ಷೇತ್ರದಲ್ಲಿ ವಿಶ್ವದಾದ್ಯಂತ ನರಗುಂದದ ಕೀರ್ತಿ ಬೆಳಗಿಸಿದ್ದ ನಾದಬ್ರಹ್ಮಾನಂದ ಸ್ವಾಮಿಗಳು ಹೃಷಿಕೇಶದಲ್ಲಿ ಅತ್ಯದ್ಭುತ ಯೋಗ ಸಾಧನೆ ಮಾಡಿದ್ದರು.
ಯೋಗವನ್ನು ಅಂತಾರಾಷ್ಟಿçÃಯ ಮಟ್ಟದಲ್ಲಿ ಬಹಳಷ್ಟು ಜನಪ್ರಿಯಗೊಳ್ಳಲು ಶ್ರಮವಹಿಸುವುದರ ಜತೆಗೆ ಯೋಗದ ಪ್ರಮುಖ ಕಾರಣಿಕರ್ತರಾಗಿ ಹೊರ ಹೊಮ್ಮಿದ್ದರು.
ಶಾಲಾ ಮಕ್ಕಳನ್ನು ಆರೋಗ್ಯವಂತರನ್ನಾಗಿಸಲು ಶಿಕ್ಷಕರು ಮಕ್ಕಳಿಗೆ ಯೋಗದ ಬಗ್ಗೆ ಪಠ್ಯಬೋಧನೆ ಮಾಡಬೇಕು. ಸದೃಢ ದೇಹದಲ್ಲಿ ಸದೃಢ ಮನಸಿರುತ್ತದೆ ಎನ್ನುವುದನ್ನು ಎಲ್ಲರೂ ಅರಿತುಕೊಳ್ಳಬೇಕು' ಎಂದರು.
ಲಯನ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಟಿ. ಗುಡಿಸಾಗರ, ಬಿ.ಎಂ. ಜಾಬಣ್ಣವರ, ಸಿ.ಎಸ್. ಸಾಲೂಟಗಿಮಠ, ಜಿ.ಬಿ. ಕುಲಕರ್ಣಿ, ಎಂ.ಎಸ್. ಪಾಟೀಲ, ಬಸು ಪಾಟೀಲ, ರಾಚನಗೌಡ ಪಾಟೀಲ, ಮುಖ್ಯೋಪಾಧ್ಯಾಯ ಗಿರೀಶ ಹಿರೇಮಠ, ಹನುಮಂತ ಹವಾಲ್ದಾರ, ಪವಾಡೆಪ್ಪ ವಡ್ಡಿಗೇರಿ, ಮಾರುತಿ ಅರ್ಭಣದ, ವಿಠ್ಠಲ ಹವಾಲ್ದಾರ. ಸಿz್ದೆÃಶ ಹೂಗಾರ, ಪಿ.ಎಸ್. ಕವಲೂರ, ಶಿವಾನಂದ ಮಲ್ಲಾಪೂರ, ಎಸ್.ಜಿ. ಜಕ್ಕಲಿ, ಐ.ಎ. ಕುಂಬಾರ, ಜ್ಯೋತಿ ಜಕ್ಕಲಿ, ಬಸವರಾಜ ಕಳಸಾ, ಸರಸ್ವತಿ ಅಕ್ಕಿ, ವಿಜಯಲಕ್ಷಿö್ಮÃ ನೂರಶೆಟ್ಟರ, ಪಲ್ಲವಿ ಸಾವಳಕರ್, ಡಿ.ಬಿ. ಪಾಟೀಲ, ಪ್ರಭಾವತಿ ಪಾಟೀಲ ಇತರರಿದ್ದರು.