ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಬೇಕಿದೆ

13ATHANIGRAMIN2
Published on

ಅಥಣಿ ಗ್ರಾಮೀಣ: ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಣ ನೀಡಿದರೆ ದೇಶ ಸುಧಾರಣೆಯಾಗಲು ಸಾಧ್ಯವಿದೆ. ನಮಗಿಂದು ವೈಜ್ಞಾನಿಕ ಮತ್ತು ಮೌಲ್ಯಾಧಾರಿತ ಶಿಕ್ಷಣ ಬೇಕಿದೆ ಎಂದು ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ ಹೇಳಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಗುಣಮಟ್ಟದ ಶಿಣದಿಂದ ಶೈಕ್ಷಣಿಕ ಮೌಲ್ಯ ಉಳಿಸುವ ಕೆಲಸವಾಗಬೇಕಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆಯಿದ್ದು, ಎಸ್​ಎಸ್​ಎಲ್​ಸಿ ಪರೀೆಯಲ್ಲಿ ಅಂಕ ಗಳಿಸುವಂತೆ ಶಿಕರು ಕಾರ್ಯನಿರ್ವಹಿಸಬೇಕು ಎಂದರು.

ವಿಜಯಪುರದ ಡಾ. ಭೀಮಾಶಂಕರ ಶರಣರು ಮಾತನಾಡಿ, ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀೆಯಲ್ಲಿ ಉಜ್ವಲ ಭವಿಷ್ಯಕ್ಕಾಗಿ ಹೆಚ್ಚು ಅಂಕ ಪಡೆಯಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು. ಮುಖಂಡ ಸುಭಾಷ ಸೋನಕರ ಮಾತನಾಡಿ, ಉತ್ತಮ ಶಿಕ್ಷಕರಿಂದಾಗಿ ಕೊಕಟನೂರ ಸರ್ಕಾರಿ ಪ್ರೌಢಶಾಲೆ ಪ್ರತಿವರ್ಷ ಅತ್ಯುತ್ತಮ ಲಿತಾಂಶ ಪಡೆಯುತ್ತಿದೆ. ಈಗಿನ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು ಹಿಂದಿನ ದಾಖಲೆ ಮೀರಿ ಸಾಧನೆ ಮಾಡಬೇಕು ಎಂದರು.

ಪ್ರೊ. ಸದಾನಂದ ಮಾಡಗ್ಯಾಳ ಉಪನ್ಯಾಸ ನೀಡಿದರು. ಎಸ್​ಡಿಎಂಸಿ ಅಧ್ಯ ನಾನಾಸಾಬ ವೀರಗೌಡ ಅಧ್ಯತೆ ವಹಿಸಿದ್ದರು. 350 ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಉಚಿತ ಪರೀಾ ಪ್ಯಾಡ್​ ವಿತರಿಸಲಾಯಿತು.

ಗ್ರಾಪಂ ಅಧ್ಯೆ ಶಾನವ್ವ ಪೂಜಾರಿ, ಗುರುಮೂರ್ತಯ್ಯ ಕಾಡದೇವರಮಠ, ಗ್ರಾಪಂ ಉಪಾಧ್ಯ ಅರ್ಜುನ ಪೂಜಾರಿ, ಮುಖಂಡರಾದ ದೇವರಾಜ ದೇಸಾಯಿ, ದೀಪಾ ಕಾಡದೇವರಮಠ, ಮಲ್ಲಿಕಾರ್ಜುನ ಪರಾಂಡೆ, ರಾವಸಾಬ ಹಳಕಿ, ನಿಂಗಪ್ಪ ಪೂಜಾರಿ, ಗ್ರಾಪಂ ಕಾರ್ಯದರ್ಶಿ ಜಯಪಾಲ ದುರ್ಗಣ್ಣವರ, ಉಪಪ್ರಾಚಾರ್ಯ ಅನಿಲ ಮೇಲಿನಕೇರಿ, ಮಾಜಿ ಯೋಧ ಸೋಮಶೇಖರ ಶರಣ, ಎಸ್​.ಬಿ. ಕುರಬರ, ಸಂತೋಷ ತಳಕೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net