ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಅರಿವು ಅಗತ್ಯ

h13-chetan business
Published on

ಹುಬ್ಬಳ್ಳಿ: ಇಲ್ಲಿಯ ಉಣಕಲ್ ಶ್ರೀನಗರದ ಚೇತನ ಬಿಜಿನೆಸ್ ಸ್ಕೂಲ್ನ ಎಂಸಿಎ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದ ಚೆ’ಟೆಕ್- 2025 ಮಂಗಳವಾರ ವಿಜೃಂಭಣೆಯಿಂದ ಏರ್ಪಡಿಸಲಾಗಿತ್ತು.

ಧಾರವಾಡ ಐಐಟಿಯ ಪ್ರೊ. ಕೊಂಜೆಬಂ ಅತಿಥಿಯಾಗಿ ಭಾಗವಹಿಸಿ, ಸ್ಪರ್ಧಾತ್ಮಕತೆಯ ಜತೆಗೆ ತಂತ್ರಜ್ಞಾನವೂ ವಿದ್ಯಾರ್ಥಿಗಳಿಗೆ ಅಗತ್ಯ. ತಂತ್ರಜ್ಞಾನ ಅಳವಡಿಸಿಕೊಂಡಷ್ಟು ವಿಫುಲ ಉದ್ಯೋಗಾವಕಾಶಗಳು ಲಭಿಸಲಿವೆ ಎಂದರು.

ಈ ಸ್ಪರ್ಧೆಯಲ್ಲಿ ಧಾರವಾಡ, ಬೆಳಗಾವಿ, ವಿಜಯಪುರ ಸೇರಿದಂತೆ 22ಕ್ಕೂ ಹೆಚ್ಚು ಕಾಲೇಜ್‌ಗಳಿಂದ ಬಿಸಿಎ, ಬಿಎಸ್ಸಿ ಹಾಗೂ ಅಂತಿಮ ವರ್ಷದ ಬಿಇ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕೋಡಿಂಗ್, ಗೇಮಿಂಗ್ ಮುಂತಾದ ತಾಂತ್ರಿಕ ಸ್ಪರ್ಧೆಗಳ ಜತೆ ನವೀನ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಕೌಶಲ ಹಾಗೂ ತಂಡದ ಭದ್ರತೆಯನ್ನು ಉತ್ತೇಜಿಸಲಾಯಿತು.

ಸ್ಕೂಲ್ ನಿರ್ದೇಶಕ ಡಾ.ವಿ.ಎಂ. ಕೊರವಿ ಅಧ್ಯಕ್ಷತೆ ವಹಿಸಿದ್ದರು.

ಶೈಕ್ಷಣಿಕ ನಿರ್ದೇಶಕರಾದ ಡಾ. ರಮಕಾಂತ ಕುಲಕರ್ಣಿ, ಎಂಸಿಎ ವಿಭಾಗದ ಮುಖ್ಯಸ್ಥ ಡಾ. ಭಾರ್ಗವ ರೇವಣಕರ, ತಾಂತ್ರಿಕ ಸಂಯೋಜಕರಾದ ಡಾ. ರವಿಕುಮಾರ, ಪ್ರೊ. ಶ್ವೇತಾ ಎಲ್. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net