ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ಅಗತ್ಯ

Untitled design
ಅರಕೇರಾ ತಾಲೂಕಿನ ಮುಷ್ಟೂರು ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿಯರಿಂದ ತಯಾರಿಸಿರುವ ಚಟುವಟಿಕೆಯೊಂದನ್ನು ಪ್ರದರ್ಶಿಸುತ್ತಿರುವುದು. ಮುಖ್ಯ ಶಿಕ್ಷಕ ರಾಚಪ್ಪ ತಂಬಾಕ, ಶೃತಿ ಸಂಸ್ಥೆ ನಿರ್ದೇಶಕ ಕಲಾವಿದ ಡಿಂಗ್ರಿ ನರಸಪ್ಪ, ಜಿಲ್ಲಾ ಸಂಯೋಜಕ ತಾಯಪ್ಪ ಹೆಗ್ಗಸನಹಳ್ಳಿ, ರಾಮಣ್ಣ ಎನ್ ಗಣೇಕಲ್ ಇತರರಿದ್ದರು.
Published on

ಅರಕೇರಾ: ವಿದ್ಯಾರ್ಥಿಗಳು ಕೌಶಲಾಧಾರಿತ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಶೃತಿ ಸಂಸ್ಕೃತಿ ಸಂಸ್ಥೆ ಜಿಲ್ಲಾ ಸಂಯೋಜಕ ತಾಯಪ್ಪ ಹೆಗ್ಗಸನಹಳ್ಳಿ ಹೇಳಿದರು.


ತಾಲೂಕಿನ ಶಿವಂಗಿ ಮತ್ತು ಮುಷ್ಟೂರು ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕ್ರೈ ಹಾಗೂ ಶೃತಿ ಸಂಸ್ಕೃತಿ ಸಂಸ್ಥೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಜೀವನ ಕೌಶಲ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೀವನ ಕೌಶಲ ತರಬೇತಿ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕೆ ಅನೂಕೂಲವಾಗುತ್ತದೆ. ವಿದ್ಯಾರ್ಥಿಗಳು ನಿರಂತರ ಕಠಿಣ ಅಭ್ಯಾಸ ಮಾಡಿ ಉನ್ನತ ಹುದ್ದೆ ಪಡೆಯಲು ಮುಂದಾಗಬೇಕು ಎಂದರು.


ವಿವಿಧ ತಂಡಗಳನ್ನು ರಚಿಸಿ ವೈಶಿಷ್ಟೃ, ಸ್ವಂತಿಕೆ, ಆತ್ಮವಿಶ್ವಾಸ, ಭಾವನೆ ಮತ್ತು ಅನಿಸಿಕೆ, ಧನಾತ್ಮಕ ಚಿಂತನೆ, ಮೌಖಿಕ ಸಂವಹನ ಚಟುವಟಿಕೆಗಳನ್ನು ಮಕ್ಕಳಿಂದ ಮಾಡಿಸಲಾಯಿತು. ಎರಡು ಶಾಲೆಯ 400 ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಲಾಂಗ್ ನೋಟ್ ಬುಕ್ ವಿತರಿಸಿದರು.

ಶೃತಿ ಸಂಸ್ಥೆ ನಿರ್ದೇಶಕ ಕಲಾವಿದ ಡಿಂಗ್ರಿ ನರಸಪ್ಪ, ಮುಖ್ಯ ಶಿಕ್ಷಕರಾದ ರಾಚಪ್ಪ ತಂಬಾಕ, ಶಿವಜಾತಪ್ಪ, ಶಿಕ್ಷಕರಾದ ಅಮಿತ್, ಶರಣಗೌಡ, ರೇಣುಕಾ, ಸವಿತಾ, ಹನುಮಂತ, ರಾಮಣ್ಣ ಎನ್ ಗಣೇಕಲ್, ಸಂಪನ್ಮೂಲ ವ್ಯಕ್ತಿಗಳಾದ ಶೋಭಾ, ಪ್ರಭಾವತಿ, ಶಶಿಕಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net