

ಹುಬ್ಬಳ್ಳಿ: ಸ್ತ್ರೀ ಸೇವಾ ಫೌಂಡೇಷನ್ ಸಹಯೋಗದಲ್ಲಿ ತಾಲೂಕಿನ ಕುಸುಗಲ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ವಿಜೃಂಭಣೆಯಿಂದ ಗಣರಾಜ್ಯೋತ್ಸವ ಆಚರಿಸಲಾಯಿತು.
ಈಶ್ವರಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಸಂತೋಷ ವೆರ್ಣೇಕರ ಮಾತನಾಡಿ, ವಿದ್ಯಾರ್ಥಿಗಳಿಗೆ ಇತಿಹಾಸದ ಕುರಿತು ಹೆಚ್ಚಿನ ಜ್ಞಾನ ಒದಗಿಸುವ ಅಗತ್ಯವಿದೆ. ಇತಿಹಾಸ ಓದಿದವರು ಮಾತ್ರ ಇತಿಹಾಸ ನಿರ್ಮಿಸಬಲ್ಲರು ಎಂಬುದು ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಮುಂದಿನ ಭವಿಷ್ಯದ ನಾಯಕರು. ನಮ್ಮ ಫೌಂಡೇಷನ್ ವತಿಯಿಂದ ವಿದ್ಯಾರ್ಥಿಗಳಿಗೆ ಸೌಲಭ್ಯ ನೀಡಲಾಗುವುದು ಎಂದರು.
ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದಿಸುವ ಮುಖಾಂತರ ಪ್ರಮಾಣಪತ್ರ ವಿತರಿಸಲಾಯಿತು.
ಸ್ತ್ರೀ ಸೇವಾ ಫೌಂಡೇಷನ್ ಅಧ್ಯಕ್ಷೆ ಸ್ನೇಹ ಜಾಧವ, ಪ್ರಮುಖರಾದ ಶಿವನಗೌಡ ಪಾಟೀಲ, ಅನು ಹಳಿಯಾಳ, ಮಹಾದೇವಿ ಗಣಾಚಾರಿ, ಭಾರತಿ ವಾಲಿ, ಮಂಜುಳಾ ಬೆಣ್ಣಿ, ಪ್ರೇಮಾ ಪೂಜಾರ ಇತರರು ಉಪಸ್ಥಿತರಿದ್ದರು.