

ನರೇಗಲ್ಲ: ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಆಸಕ್ತಿ, ಸಮಯ ಪಾಲನೆ ಮತ್ತು ನಿರಂತರತೆ ಹೊಂದಿದ್ದರೆ ಗುರಿಯನ್ನು ನಿರಾಂತಕವಾಗಿ ಮುಟ್ಟಬಹುದು ಎಂದು ಸಾಹಿತಿ, ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ ಹೇಳಿದರು.
ಸಮೀಪದ ಜಕ್ಕಲಿ ಗ್ರಾಮದ ಶ್ರೀ ಅಂದಾನಪ್ಪ ಜ್ಞಾನಪ್ಪ ದೊಡ್ಡಮೇಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಮಹಾ ಸರಸ್ವತಿ ಪೂಜೆ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯೋಪಾಧ್ಯಾಯ ಬಿ.ಆರ್. ಗದುಗಿನ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಗಂಗಮ್ಮ ಜಂಗಣ್ಣವರ, ಉಪಾಧ್ಯಕ್ಷೆ ಯಲ್ಲವ್ವ ಮಾದರ, ಶಿಕ್ಷಕರಾದ ಆರ್.ಡಿ. ಬಡಿಗೇರ, ಪರಶುರಾಮ ಹರಿಜನ, ಕಮಲಮ್ಮ ಜೋಗಿನ, ದೀಪಾ ತುಕ್ಕೋಜಿ, ಸಿಬ್ಬಂದಿ ಇದ್ದರು. ಶಿಕ್ಷಕಿ ಯು.ಎಸ್. ಕಣವಿ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕಿ ಸುನೀತಾ ಪಾಟೀಲ ಪ್ರಶಸ್ತಿ ವಿತರಣೆ ನೆರವೇರಿಸಿದರು. ಶಿಕ್ಷಕಿ ಗೌರಮ್ಮ ಸ್ವಾಗತಿಸಿದರು. ಶಿಕ್ಷಕ ವಿ.ವಿ. ಅಣ್ಣಿಗೇರಿ ನಿರೂಪಿಸಿದರು. ನೆಹರು ಮನೋಳಿ ವಂದಿಸಿದರು.