

ಹುಬ್ಬಳ್ಳಿ: ನಗರದ ಚೇತನ ವಾಣಿಜ್ಯ ಬಿಬಿಎ ಮತ್ತು ಬಿಸಿಎ ಮಹಾವಿದ್ಯಾಲಯದಲ್ಲಿ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರವೇಶೋತ್ಸವ ಹಾಗೂ ಪರಿಚಯ (ಆಗಮನ-2025) ಕಾರ್ಯಕ್ರಮ ಸೋಮವಾರ ಏರ್ಪಡಿಸಲಾಗಿತ್ತು.
ಲೆಕ್ಕಪರಿಶೋಧಕ ವಿರೂಪಾಕ್ಷ ಹಿಪ್ಪರಗಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕಾರಯುತ ಶಿಕ್ಷಣ ಪಡೆದುಕೊಳ್ಳುವುದು ಅತ್ಯಂತ ಅವಶ್ಯಕ. ಓದಿನ ಜತೆಗೆ ಜೀವನ ಕೌಶಲ ಬೆಳೆಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ಅವಕಾಶ ಲಭಿಸಲಿವೆ ಎಂದರು.
ಸಂಪನ್ಮೂಲ ವ್ಯಕ್ತಿ ಸಂತೋಷ ಹಬೀಬ, ವಾಣಿಜ್ಯ, ನಿರ್ವಹಣಾ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿರುವ ಅಪಾರ ಅವಕಾಶಗಳ ಕುರಿತು ವಿವರಿಸಿದರು.
ಚೇತನ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ವಿಶ್ವನಾಥ ಕೊರವಿ ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿ ಹಿದಾಯತ್ ಕೆ., ಪ್ರಾಚಾರ್ಯ ಡಾ. ಅಶೋಕ ವಡಕಣ್ಣವರ, ಶೈಕ್ಷಣಿಕ ಸಲಹೆಗಾರ ಡಾ.ಕೆ.ಸಿ. ಪಾಂಗಿ, ಡಾ. ಶಿಲ್ಪಾ ಕುಲಕರ್ಣಿ, ಪ್ರೊ. ಶರತ್ ರಾಯರ, ಪ್ರೊ. ಗೌರಿ ಬುಳ್ಳಣ್ಣವರ, ಪ್ರೊ. ನಿಧಿ ದೇಶಪಾಂಡೆ, ಪ್ರೊ. ಭಾಗ್ಯಶ್ರೀ ಇತರರು ಇದ್ದರು.