ವಿದ್ಯಾರ್ಥಿಗಳಿಂದ ಶಾಸಕ ಕಲ್ಪಿತ ಶವಯಾತ್ರೆ

hutti protst
ಹಟ್ಟಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ಶಾಸಕರ ಕಲ್ಪಿತ ಶವಯಾತ್ರೆ ಮೂಲಕ ಪ್ರತಿಭಟನೆ ನಡೆಸಿದರು. ಪ್ರಮುಖರಾದ ಗೋವಿಂದ, ನಿಂಗಪ್ಪ ವೀರಾಪುರ, ಚನ್ನಬಸವ, ವನಜಾಕ್ಷಿ, ಯಲ್ಲಪ್ಪ, ವಿನೋದ ಕುಮಾರ, ಸಾಹೇರಬಾನು, ಗಾಯಿತ್ರಿ, ದುರುಗಮ್ಮ, ದಾವೂದ್, ನಜೀರ್, ಮಹಾಂತೇಶ್, ನರಸಮ್ಮ, ಇಮ್ರಾನ್, ರಿಯಾಜ್, ರೂಪಾ ಇತರರಿದ್ದರು.
Published on

ಹಟ್ಟಿಚಿನ್ನದಗಣಿ: ಕಾಲೇಜಿನಲ್ಲಿ ಮೂಲಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿರುವ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ಶಾಸಕ ಕಲ್ಪಿತ ಶವಯಾತ್ರೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಕಾಲೇಜಿನ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ತೆರವುಗೊಳಿಸಿ ಹೊಸ ಬಿಲ್ಡಿಂಗ್ ನಿರ್ಮಿಸಬೇಕು. ಪ್ರತ್ಯೇಕ ಶೌಚಗೃಹ, ಶುದ್ಧ ಕುಡಿವ ನೀರಿನ ಘಟಕ, ಗ್ರಂಥಾಲಯ ನಿರ್ಮಾಣ, ಕಾಯಂ ಶಿಕ್ಷಕರನ್ನು ನೇಮಿಸುವುದರ ಜತೆಗೆ ಕಾಲೇಜಿನಲ್ಲಿ ಅಗತ್ಯ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಮೂರು ದಿನಗಳಿಂದ ಕಾಲೇಜು ಆವರಣದಲ್ಲಿ ಧರಣಿ ನಡೆಸಲಾಗುತ್ತಿದೆ. ಆದರೆ, ಈವರೆಗೆ ಲಿಂಗಸಗೂರಿನ ಶಾಸಕ ಮಾನಪ್ಪ ವಜ್ಜಲ್ ಭೇಟಿ ನೀಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಎಂಎಲ್‌ಎ ಕಲ್ಪಿತ ಶವಯಾತ್ರೆ ನಡೆಸಿದರು.

ಹಟ್ಟಿ ಕ್ಯಾಂಪ್ ಬಸ್‌ನಿಲ್ದಾಣದಿಂದ ಕಾಕನಗರ, ಸಿದ್ಧಾರೂಢಮಠ, ಕೋಠ ಕ್ರಾಸ್, ಬಸವನಗರ, ಹಳೇ ಪಂಚಾಯಿತಿ, ಬುಡ್ಡೇಕಲ್ ಚೌಕ್, ಹುಚ್ಚಬುಡ್ಡೇಶ್ವರ ಚೌಕ್ ಮುಖಾಂತರ ಹಳೇ ಬಸ್ ನಿಲ್ದಾಣದವರೆಗೆ ಕಲ್ಪಿತ ಶವಯಾತ್ರೆ ನಡೆಸಲಾಯಿತು.

ಈ ವೇಳೆ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವೀರಾಪುರ ಮಾತನಾಡಿ, ಶಾಸಕ ಮಾನಪ್ಪ ವಜ್ಜಲ್ ಶಾಲಾ-ಕಾಲೇಜುಗಳಿಗೆ ಒತ್ತುನೀಡುವ ಬದಲು, ಬಾರ್ ಮತ್ತು ರೆಸ್ಟೋರೆಂಟ್‌ಗಳು, ಮಟ್ಕಾ, ಇಸ್ಪೀಟ್, ಗಾಂಜಾ ಮಾರಾಟ ಮಾಡುವವರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದರಿಂದ ಇಲ್ಲಿನ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಪಪೂ ಕಾಲೇಜಿಗೆ ಅಗತ್ಯ ಸೌಕರ್ಯ ಕಲ್ಪಿಸಬೇಕು.

ಪಟ್ಟಣದಲ್ಲಿ ಐಟಿಐ, ಡಿಪ್ಲೊಮಾ, ಪದವಿ ಕಾಲೇಜುಗಳನ್ನು ಆರಂಭಿಸಬೇಕು. ನಿರ್ಲಕ್ಷಿಸಿದರೆ ಹಟ್ಟಿ ಪಟ್ಟಣ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.

ಪ್ರಮುಖರಾದ ಗೋವಿಂದ, ನಿಂಗಪ್ಪ ವೀರಾಪುರ, ಚನ್ನಬಸವ, ವನಜಾಕ್ಷಿ, ಯಲ್ಲಪ್ಪ, ವಿನೋದ ಕುಮಾರ, ಸಾಹೇರಬಾನು, ಗಾಯಿತ್ರಿ, ದುರುಗಮ್ಮ, ದಾವೂದ್, ನಜೀರ್, ಮಹಾಂತೇಶ್, ನರಸಮ್ಮ, ಇಮ್ರಾನ್, ರಿಯಾಜ್, ರೂಪಾ, ತನುಶ್ರೀ, ತಬ್ಸುಮ್, ರೇಣುಕಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net