ವಿದ್ಯಾರ್ಥಿಗಳು ಸಾಧನೆಯತ್ತ ಮುನ್ನುಗ್ಗಲಿ

24ATHANI4
Published on

ಅಥಣಿ: ಸಕಾರಾತ್ಮಕ ಆಲೋಚನೆ ನಮ್ಮನ್ನು ಯಶಸ್ಸಿನತ್ತ ಸಾಗುವಂತೆ ಮಾಡುತ್ತದೆ. ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆ ಹೊಂದಿ ಸಾಧನೆಯತ್ತ ಮುನ್ನುಗ್ಗಬೇಕು ಎಂದು ಬಾಗಲಕೋಟೆ ಜಿಪಂ ಗ್ರಾಮೀಣಾಭಿವೃದಿಟಛಿ ಜಂಟಿ ನಿರ್ದೇಶಕ ಮಲಗೌಡ ಜೇರೆ ಹೇಳಿದರು.

ಪಟ್ಟಣದ ಜೆಎ ಪಿಯು ಕಾಲೇಜಿನಲ್ಲಿ ಸಾಂಸತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಆತ್ಮವಿಶ್ವಾಸ, ರ್ನಿದಿಷ್ಟ ಗುರಿ ಮತ್ತು ಪ್ರಾಮಾಣಿಕ ಪ್ರಯತ್ನದೊಂದಿಗೆ ಶಿಕರ ಸಹಕಾರ ಪಡೆದು ಸಾಧನೆಯತ್ತ ಮುನ್ನುಗ್ಗಬೇಕು ಎಂದರು.

ಅಭಿವೃದಿಟಛಿ ಸಮಿತಿ ಅಧ್ಯ ಸಂದೀಪ ಸಂಗೊರಾಮ ಮಾತನಾಡಿ, ವಿದ್ಯಾರ್ಥಿಗಳು ಸಂಸ್ಥೆಯಿಂದ ನೀಡುವ ಸಿಇಟಿ, ನೀಟ್​ ಮತ್ತು ಸಿಎ ತರಬೇತಿ ಪಡೆದು ಶ್ರಮವಹಿಸಿ ಉತ್ತಮ ಸಾಧನೆ ಮಾಡಬೇಕು ಎಂದರು.

ವೈದ್ಯ ಶ್ರೀವತ್ಸ ಕುಲಕರ್ಣಿ, ಸಂಸ್ಥೆ ಅಧ್ಯ ಡಾ.ರಾಮ ಕುಲಕರ್ಣಿ ಮಾತನಾಡಿದರು. ಕರ್ನಾಟಕ ಸ್ಟೇಟ್​ ಸೈಂಟಿಫಿಕ್​ ರಿಸರ್ಚ್​ ಕೌನ್ಸಿಲ್​ ಅಥಣಿ ತಾಲೂಕಿನ ಮಹಿಳಾ ಟಕದ ಅಧ್ಯರಾಗಿ ಆಯ್ಕೆಯಾದ ಸಾನಿಯಾ ಮಕಾನದಾರ್​ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಎಂ.ಪಿ.ಮೇತ್ರಿ ಸ್ವಾಗತಿಸಿದರು. ಉಪನ್ಯಾಸಕಿ ಪಿ.ಎಂ.ಹುಲಗಬಾಳಿ ಅತಿಥಿಗಳನ್ನು ಪರಿಚಿಯಿಸಿದರು. ಬಿ.ಎಸ್​.ಲೋಕುರ ವಂದಿಸಿದರು. ವಿದ್ಯಾ ಬುರ್ಲಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net