ಮಕ್ಕಳಿಗೆ ವ್ಯವಹಾರಿಕ ಜ್ಞಾನವೂ ಬೇಕು

IMG_20231204_181631
Published on

ಬೇಲೂರು : ಮಕ್ಕಳಿಗೆ ಪಠ್ಯದ ಪರಿಣತಿಯೊಂದಿಗೆ ವ್ಯವಹಾರಿಕ ಜ್ಞಾನವೂ ಬೇಕು ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಹೇಳಿದರು.
ಪಟ್ಟಣದ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ಸೋಮವಾರ ಬಿಇಒ ಕಚೇರಿ ವತಿಯಿಂದ ಆಯೋಜಿಸಿದ್ದ ಮಕ್ಕಳ ಸಂತೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಪ್ರತಿ ಕ್ಷೇತ್ರದಲ್ಲೂ ಮೋಸ, ವಂಚನೆ ಹೆಚ್ಚಾಗುತ್ತಿವೆ. ಮಕ್ಕಳಿಗೆ ಚಿಕ್ಕಂದಿನಲ್ಲೇ ವ್ಯವಹಾರಿಕ ಜ್ಞಾನವನ್ನು ರೂಢಿಸಿಕೊಂಡರೆ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಮಾತನಾಡಿ, ಡಿಸೆಂಬರ್ ತಿಂಗಳಲ್ಲಿ ಇಲಾಖೆ ಗಣಿತ ಮಾಸಚಾರಣೆ ನಡೆಸುತ್ತಿದೆ. ಗಣಿತದ 31 ಮೂಲ ಪರಿಕಲ್ಪನೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಿದ್ದೇವೆ. ತಾಲೂಕಿನ 37 ಗ್ರಾಮ ಪಂಚಾಯಿತಿಗಳ 25 ಶಾಲೆಗಳಲ್ಲಿ ಇಂದು ಏಕ ಕಾಲದಲ್ಲಿ ಮಕ್ಕಳ ಸಂತೆ ಆಯೋಜಿಸಿಸಿ ಲೆಕ್ಕಾಚಾರ ಮತ್ತು ವಹಿವಾಟಿನ ಅರಿವು ಮೂಡಿಸಲಾಗುತ್ತಿದೆ ಎಂದರು. ಕ್ಷೇತ್ರ ಶಿಕ್ಷಣ ಸಮಾನ್ವಯಧಿಕಾರಿ ಶಿವಮರಿಯಪ್ಪ, ಇಒ ರವಿಕುಮಾರ್, ಶಿಕ್ಷಕ ಭದ್ರೇಗೌಡ, ಮಾರುತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net