ಸಾಮಾನ್ಯ ಜ್ಞಾನದಲ್ಲಿ ವಿದ್ಯಾಥಿರ್ಗಳ ಸಾಧನೆ

IMG_20230923_203216_888-1.jpg
Published on

ಹುಬ್ಬಳ್ಳಿ: ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಾದ ಶಿವರಾಜ ಚಲವಾದಿ ಹಾಗೂ ಸಂಜನಾ ಅವರು ಸಾಮಾನ್ಯ ಜ್ಞಾನ ವಿಭಾಗದಲ್ಲಿ ಅದ್ಭುತ ಸಾಧನೆ ಮಾಡುವ ಮೂಲಕ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಎಂದು ರಾಯಚೂರು ಜಿಲ್ಲೆ ಮುದ್ಗಲ್ ಪಟ್ಟಣದ ಮಣಿಕಂಠ ಬಳ್ಳಾರಿ ನಿರಂತರ ಶಿಕ್ಷಣ ತರಬೇತಿ ಸಂಸ್ಥೆಯ ಅಪ್ಪು ವಿದ್ಯಾಧಾಮದ ವ್ಯವಸ್ಥಾಪಕ ಮಹಾಂತೇಶ ಚಲವಾದಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು 20 ವಿಶ್ವ ದಾಖಲೆಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಎರಡು ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್, ನಾಲ್ಕು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಆರು ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಹಾಗೂ ವಿವಿಧ ಸಂಘ ಸಂಸ್ಥೆಗಳ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದರು.

ಶಿವರಾಜ ಮತ್ತು ಸಂಜನಾ ಅಣ್ಣ-ತಂಗಿಯಾಗಿದ್ದು, ಯಲ್ಲಪ್ಪ ಚಂದ್ರಕಲಾ ದಂಪತಿಯ ಮಕ್ಕಳಾಗಿದ್ದಾರೆ. ತಾಯಿ ಆಶಾ ಕಾರ್ಯಕರ್ತೆ.

ಇಬ್ಬರು ಮಕ್ಕಳು ಸಾಮಾನ್ಯ ಜ್ಞಾನದಲ್ಲಿ ಅದ್ವೀತಿಯ ಸಾಧನೆ ಮಾಡಿದ್ದಾರೆ. 60 ಸಾವಿರ ಪ್ರಶ್ನೆಗಳಿಗೆ ನಿರರ್ಗಳವಾಗಿ ಉತ್ತರಿಸುತ್ತಾರೆ. 195 ದೇಶ, ಅವುಗಳ ರಾಜಧಾನಿ ಹಾಗೂ ಕರೆನ್ಸಿ, 100 ರಾಸಾಯನಿಕ ಫಾರ್ಮುಲಾ, ಕವಿಗಳ ಕಾವ್ಯನಾಮ, ನಟ ಪುನೀತ ರಾಜಕುಮಾರ ಅವರು ನಟಿಸಿದ ಎಲ್ಲ ಚಿತ್ರಗಳ ಹೆಸರುಗಳು, ದೇಶದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದವರ ಹೆಸರು, ಭಾರತರತ್ನ ಪ್ರಶಸ್ತಿ ಪುರಸತರ ಹೆಸರು ಹೀಗೆ ವಿವಿಧ ಸಾಮಾನ್ಯ ಜ್ಞಾನದ ವಿಷಯಗಳನ್ನು ಪ್ರಸ್ತುತಪಡಿಸುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net