

ಇಟಗಿ: ಕಲಿತ ಶಾಲೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಮೂಲಕ ಋಣ ತೀರಿಸಿದರೆ ಅದೇ ನಿಜವಾದ ಗುರುವಂದನೆ ಎಂದು ಹುಕ್ಕೇರಿ-ಬೆಳಗಾವಿ ಗುರು ಶಾಂತೇಶ್ವರ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಪಾರಿಶ್ವಾಡ ಗ್ರಾಮದ ಬಿ.ವಿ. ಸಂಬರಗಿ ಪ್ರೌಢಶಾಲೆಯ 1995-96ನೇ ಸಾಲಿನ ವಿದ್ಯಾರ್ಥಿಗಳಿಂದ ದಾನಮ್ಮ ದೇವಿ ಮಂಗಲ ಕಾರ್ಯಾಲಯದ ಶರಣೆ ಮಲ್ಲಮ್ಮ ಮಲ್ಲಿಕಾರ್ಜುನ ಗುಳಶೆಟ್ಟಿ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಮತ್ತು ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಸಮಾಜಕ್ಕೆ ಉತ್ತಮ ಸಂಸ್ಕಾರವುಳ್ಳ ಶಿಕ್ಷಣದ ಅವಶ್ಯಕತೆ ಇದೆ. ಶಾಲೆಯ ಹಳೆಯ ವಿದ್ಯಾರ್ಥಿಗಳು ಹಲವು ವರ್ಷಗಳ ನಂತರ ಒಂದೆಡೆ ಸೇರಿ ಗುರುಗಳನ್ನು ನೆನಪಿಸಿಕೊಂಡು ಗುರುವಂದನೆ ಸಲ್ಲಿಸಿದ್ದು ಅನುಕರಣೀಯ ನಡೆ ಎಂದರು.
ವಿದ್ಯಾರ್ಥಿ ಹಾಗೂ ಬೆಳಗಾವಿ ರೋಟರಿ ಕ್ಲಬ್ ಆ್ ಸೆಂಟ್ರಲ್ ಅಧ್ಯಕ್ಷ ಮಂಜುನಾಥ ಅಳವಣಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳು ಪ್ರತಿವರ್ಷ ಗುರುವಂದನೆಯ ನೆನಪಿಗಾಗಿ ಹಣ ಸಂಗ್ರಹಿಸಿ ಶಾಲೆಯ ಶೈಕ್ಷಣಿಕ ಪ್ರಗತಿಗೆ ಶ್ರಮಿಸಲಾಗುವುದು. ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಶಾಲೆ ಮತ್ತು ಗುರುಗಳ ಮೇಲಿನ ಪ್ರೀತಿ ವಾತ್ಸಲ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಪಾರಿಶ್ವಾಡ ಹನಿವೆಲ್ ಇಂಟರ್‌ನ್ಯಾಷನಲ್ ಶಾಲೆಯ ಅಧ್ಯಕ್ಷ ಸುಭಾಸ ಗುಳಶೆಟ್ಟಿ, ಸಾಹಿತಿಗಳಾದ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ಡಾ.ನಿರ್ಮಲಾ ಬಟ್ಟಲ್, ನಿವೃತ್ತ ಶಿಕ್ಷಕರಾದ ಎಸ್.ಜಿ. ಜೋಗಪ್ಪಗೋಳ, ಎಸ್.ಜಿ. ಗುಗ್ಗರಿ, ಎಲ್.ಕೆ. ಹೊಸೂರ ಮಾತನಾಡಿದರು, ಮಂಜುನಾಥ ಗಡಾದ, ಬಸವರಾಜ ಕಲಾರಕೊಪ್ಪ ಅನಿಸಿಕೆ ಹಂಚಿಕೊಂಡರು. ಮಲಪ್ರಭಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಶೇಖರ ಸಂಬರಗಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಎಂ.ಬಿ.ಯರೂರ, ಗೊಮಟೇಶ ಗಟ್ಟದ, ಶಾಂತಾ ಉಪ್ಪಿನ, ಜಯಶ್ರೀ ಬಡಿಗೇರ, ಶಿವಾನಂದ ಗುಡ್ಲಿ , ರಾಜಶೇಖರ ಕಮ್ಮಾರ, ವಿಠ್ಠಲ ಕೊಣಸಗುಂಪಿ, ಮಾಲಾ ಹೊನ್ನನ್ನವರ, ಪ್ರಕಾಶ ಪಾಯಣ್ಣವರ, ಶೋಭಾ ಅಗಸಿಮನಿ ಇತರರಿದ್ದರು.