ಆಟೋ ಪಲ್ಟಿಯಾಗಿ ವಿದ್ಯಾರ್ಥಿಗಳಿಗೆ ಗಾಯ

kls sss
ಆಟೋ ಪಲ್ಟಿಯಾಗಿ ಗಾಯಗೊಂಡ ವಿದ್ಯಾರ್ಥಿ
Published on

ಕಳಸ: ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋ ಪಲ್ಟಿಯಾಗಿ ಇಬ್ಬರು ಮಕ್ಕಳಿಗೆ ಗಾಯಗಳಾಗಿದೆ.

ಹೊರನಾಡು ರಸ್ತೆಯ ಅಂಬಾತೀರ್ಥ ಮಾರ್ಗದಲ್ಲಿ ಹೋಗುವಾಗ ಆಟೋ ರಿಕ್ಷಾ ಪಲ್ಟಿಯಾಗಿದೆ. ಆಟೋದಲ್ಲಿದ್ದ ಐವರು ವಿದ್ಯಾರ್ಥಿಗಳ ಪೈಕಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಧನ್ವಿತ್, ಜೆಇಎಂ ಶಾಲೆಯ ಶನನ್ ರೋಟ್ರಿಗಸ್‌ಗೆ ಗಾಯಗಳಾಗಿದೆ. ವಿದ್ಯಾರ್ಥಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net