ಪ್ರಶಿಣಾರ್ಥಿಗಳು ಆದರ್ಶ ಚಿಂತನೆ ಹೊಂದಲಿ

15MNL3
Published on

ಮುನವಳ್ಳಿ: ಶಿಕರ ಬಗ್ಗೆ ಸಮಾಜ ಇಟ್ಟುಕೊಂಡಿರುವ ಅಪಾರ ಗೌರವ ಉಳಿಸಿಕೊಳ್ಳಲು ಭಾವಿ ಶಿಕರು ಆದರ್ಶ ಚಿಂತನೆ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಮಹಾಲಿಂಗಪುರದ ರಾಷ್ಟ್ರ ಪ್ರಶಸ್ತಿ ವಿಜ್ಞಾನ ಶಿಕಿ ಡಾ.ಸ್ವಪ್ನಾ ಅನಿಗೋಳ ಕರೆ ನೀಡಿದರು.

ಪಟ್ಟಣದ ಜೆಎಸ್​ಪಿ ಸಂದ ಶ್ರೀ ಭೀಮರಾಯಪ್ಪ ಕೀರಪ್ಪ ಯಲಿಗಾರ ಶಿಣ (ಬಿ.ಇಡಿ) ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದ್ವೀತಿಯ ವರ್ಷದ ಪ್ರಶಿಣಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದೀಪದಾನ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮೌಲ್ಯಯುತ ಗುಣಾತ್ಮಕ ಶಿಣ ನೀಡುವುದರ ಜತೆಗೆ ಸಮಾಜ ಕಟ್ಟುವ ಜವಾಬ್ದಾರಿ ನಿರ್ವಹಿಸಿ ಮಾದರಿ ಶಿಕರಾಗಬೇಕು ಎಂದರು. ಸಂಸ್ಥೆ ಕೋಶಾಧ್ಯ ರವೀಂದ್ರ ಯಲಿಗಾರ ಮಾತನಾಡಿ, ರಾಷ್ಟ್ರ ನಿರ್ಮಾಣದಲ್ಲಿ ಶಿಕರ ಪಾತ್ರ ಮುಖ್ಯವಾಗಿದ್ದು, ಶಿಕರಾದವರು ಮೊದಲು ತಮಗೆ ತಾವೇ ಆದರ್ಶವಾಗಿ ನಡೆದುಕೊಳ್ಳಬೇಕು ಎಂದರು. ವಿವಿಧ ಸ್ಪರ್ಧೆಗಳ ವಿಜೇತರ ಬಹುಮಾನ ವಿತರಣೆ ಸಮಾರಂಭ ಜರುಗಿತು.ಸಂಸ್ಥೆ ಚೇರ್ಮನ್​ ಎಂ.ಆರ್​.ಗೋಪಶೆಟ್ಟಿ, ಸದಸ್ಯ ಮಹೇಶ ಯಲಿಗಾರ, ಸುಧಾಕರ ರೇಣಕೆ, ಪ್ರಾಚಾರ್ಯ ಡಾ.ಎ.ಎಸ್​.ಅಮೋಘಿಮಠ, ಆಡಳಿತಾಧಿಕಾರಿ ಎ.ಎಂ.ಕರೀಕಟ್ಟಿ, ಎ.ಎ.ಅಬ್ಬಾರ, ಎ್​.ಬಿ.ಭೋವಿ. ಜಿ.ವಿ.ಹಡಪದ, ಜೆ.ಕೆ.ಬಡಿಗೇರ, ಪಿ.ವಿ.ಮೊಹರೆ, ಎಲ್​.ಎನ್​.ತ್ಯಾಪಿ. ಗೋವಿಂದ ನರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net