ವಿದ್ಯಾರ್ಥಿಗಳು ಮೆಚ್ಚುವಂತ ಕಾರ್ಯ ಮಾಡಲಿ

Untitled design
ತಾವರಗೇರಾ ಸಮೀಪದ ಜುಮಲಾಪೂರ ಸರ್ಕಾರಿ ಪ್ರೌಡಶಾಲೆಯಲಿ ಕಾನೂನು ಅರಿವು, ನೆರವು ಕಾರ್ಯಕ್ರಮಕ್ಕೆ ತಾಲೂಕು ನ್ಯಾಯಾಧೀಶ ದೇವೇಂದ್ರ ಪಂಡಿತ ಚಾಲನೆ ನೀಡಿದರು. ವಕೀಲರಾದ ಮುತ್ತು ಬರದೇಲಿ , ಸೋಮನಗೌಡ , ಖಾಜಾ ಮೈನುದ್ದೀನ , ಬಸವರಾಜ ಇದ್ದರು.
Published on

ತಾವರಗೇರಾ: ವಿದ್ಯಾರ್ಥಿಯ ಜೀವನದಲ್ಲಿ ಗುರಿಯ ಸ್ಪಷ್ಟತೆ ಇದ್ದಾಗ ಸಾಧಿಸಲು ಸಾಧ್ಯ ಎಂದು ತಾಲೂಕು ನ್ಯಾಯಾಧೀಶ ದೇವೇಂದ್ರ ಪಂಡಿತ ಹೇಳಿದರು.

ಸಮೀಪದ ಜುಮಲಾಪೂರದ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಕಾನೂನು ಅರಿವು, ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಾಲಕರು, ಗುರುಗಳು, ಮೆಚ್ಚುವಂಥ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದರು.

ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಪವಿತ್ರ ಗ್ರಂಥ ಭಾರತ ಸಂವಿಧಾನ

ದೇಶದಲ್ಲಿನ ಎಲ್ಲ ಧರ್ಮ ಗ್ರಂಥಗಳು ಶ್ರೇಷ್ಠವಾಗಿವೆ. ಆದರೆ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಪವಿತ್ರ ಗ್ರಂಥ ಭಾರತ ಸಂವಿಧಾನವಾಗಿದೆ. ಪ್ರತಿಯೊಬ್ಬರು ಸಂವಿಧಾನವನ್ನು ಅರಿತುಕೊಳ್ಳಬೇಕಾಗಿದೆ. 12ನೇ ಶತಮಾನದಲ್ಲಿ ಬಸವಣ್ಣ ಅವರು ಸಂವಿಧಾನದ ಪ್ರಮುಖ ಅಂಶಗಳನ್ನು ವಚನದ ಮೂಲಕ ಉಲ್ಲೇಖಿಸಿ ವಿಶ್ವಕ್ಕೆ ಕಾನೂನಿನ ಅರಿವು ಮೂಡಿಸಿದ್ದರು ಎಂದರು.

ಹಿರಿಯ ವಕೀಲ ನಾಗರಾಜ್ ಪ್ಯಾನಲ್ ಅವರು ಬಾಲಕಾರ್ಮಿಕ ವಿರೋಧಿ ಕಾನೂನುಗಳ ಕುರಿತಾಗಿ ಉಪನ್ಯಾಸ ನೀಡಿದರು. ಹಿರಿಯ ವಕೀಲ ಎಸ್.ಜಿ.ಪೊಲೀಸ್ ಪಾಟೀಲ್ ಸಾಸ್ವಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ಮುತ್ತು ಬರದೆಲಿ ಮಾದಾಪೂರ್ ಹಾಗೂ ಶಾಲಾ ಮುಖ್ಯಶಿಕ್ಷಕ ಸೋಮನಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಕೀಲ ಸಂಗನಗೌಡ ಪೊಲೀಸ್ ಠಾಣಾಧಿಕಾರಿ ಖಾಜಾ ಮೋಹಿನುದ್ದೀನ್, ಎಸ್ಡಿಎಂಸಿ ಅಧ್ಯಕ್ಷ ಕನಕಪ್ಪ ನಾಯಕ, ಸದಸ್ಯರಾದ ಅಮರೇಶ ಕುಷ್ಟಗಿ, ಮೂಡಬಸಪ್ಪ ಬನ್ನಟ್ಟಿ, ಯಲ್ಲಮ್ಮ ಚಲವಾದಿ, ಶಿವಪ್ಪ ಟಕ್ಕಳಕಿ, ಗ್ರಾಮ ಪಂಚಾಯತಿ ಸದಸ್ಯರಾದ ಶರಣಪ್ಪ ನಾಯಕ, ಶಿಕ್ಷಕರಾದ ಬಸವರಾಜ್ ಬಾಗಲಿ , ಹನುಮಂತಪ್ಪ, ಅಕ್ಕಮ್ಮ ಅರಳಿಕಟ್ಟಿ , ಗೌರಮ್ಮ ಗೋಂದಳಿ, ಶಶಿಧರ ಗೊರಬಾಳ ಸ್ವಾಗತಿಸಿದರೆ, ಶಿಕ್ಷಕ ಚಿದಾನಂದಪ್ಪ ಕಂದಗಲ್ ಸೇರಿ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net