ವಿದ್ಯಾರ್ಥಿಗಳು ಚುಡಾಯಿಸುವುದರಿಂದ ದೂರ ಇರಲಿ

07Jaggu10
ಬೆಳಗಾವಿ ಕೆಎಲ್‌ಇ ಶುಶ್ರೂಷ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಚುಡಾಯಿಸುವುದರ ವಿರೋದಿ ಸಪ್ತಾಹ ಸಮಾರೋಪವನ್ನು ಡಿಸಿಪಿ ಪಿ.ವಿ.ಸ್ನೇಹಾ ಉದ್ಘಾಟಿಸಿದರು. ಡಾ.ರಂಜಿತ ಕಾಂಗ್ಲೆ, ಡಾ.ಸಂಗೀತಾ ಖರಡೆ, ಡಾ.ಪ್ರೀತಿ ಭೂಪಾಲಿ, ವಿದ್ಯಾರ್ಥಿಗಳು ಇದ್ದರು.
Published on

ಬೆಳಗಾವಿ: ನಗರದ ಕೆಎಲ್‌ಇ ಶುಶ್ರೂಷ ಮಹಾವಿದ್ಯಾಲಯದ ಆ್ಯಂಟಿ ಚುಡಾಯಿಸುವು ಕೋಶದಿಂದ ಆಯೋಜಿಸಿದ್ದ ಚುಡಾಯಿಸುವುದರ ವಿರೋದಿ ಸಪ್ತಾಹ ಸಮಾರೋಪ ಬುಧವಾರ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಪಿ.ವಿ.ಸ್ನೇಹಾ, ಚುಡಾಯಿಸುವುದು ತಪ್ಪು. ವಿದ್ಯಾರ್ಥಿಗಳು ಚುಡಾಯಿಸುವುದರಿಂದ ದೂರ ಉಳಿಯಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ಡಾ.ವೀರೇಶಕುಮಾರ ನಂದಗಾವ ಚುಡಾಯಿಸುವುದರ ವಿರೋದಿ ತಂಡವು ತನ್ನ ಎಲ್ಲ ಜವಾಬ್ದಾರಿ ನಿಭಾಯಿಸುತ್ತಿದೆ ಎಂದರು. ಕೆಎಲ್‌ಇ ಸ್ವಾಯತ್ತ ವಿವಿ ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಡಾ.ರಂಜಿತ ಕಾಂಗ್ಲೆ, ಕೆಎಲ್‌ಇ ನರ್ಸಿಂಗ್ ಕಾಲೇಜಿನ ಉಪಪ್ರಾಚಾರ್ಯೆ ಡಾ.ಸಂಗೀತಾ ಖರಡೆ, ಡೀನ್ ಡಾ.ಪ್ರೀತಿ ಭೂಪಾಲಿ, ನರ್ಸಿಂಗ್ ಕಾಲೇಜಿನ ಎಲ್ಲ ವಿಭಾಗದ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಇದ್ದರು. ಚುಡಾಯಿಸುವುದರ ವಿರೋ ತಂಡದ ಕಾರ್ಯದರ್ಶಿ ಸಂಜೀವ ಬಡ್ಲಿ ಸ್ವಾಗತಿಸಿದರು. ಅಲ್ಬಿನಾ ಸಿಜು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net