ವಿದ್ಯಾರ್ಥಿನಿಯರ ಸ್ನೇಹಮೇಳ

27manju5
ಬೆಳಗಾವಿ ನಗರದ ಉಷಾತಾಯಿ ಗೋಗಟೆ ವಿದ್ಯಾಲಯದಲ್ಲಿ ಹಳೆಯ ವಿದ್ಯಾರ್ಥಿನಿಯರ ಸ್ನೇಹಮೇಳ ಕಾರ್ಯಕ್ರಮ ಜರುಗಿತು. ಅವಿನಾಶ ಪೋತದಾರ, ಶ್ರೀನಿವಾಸ ಶಿವಣಗಿ, ಲಲಿತಾ ಮದಿಹಳ್ಳಿ ಇತರರಿದ್ದರು.
Published on

ಬೆಳಗಾವಿ: ಇಲ್ಲಿನ ಬೆಲಗಾಮ ಎಜುಕೇಷನ್ ಸೊಸೈಟಿ ಮತ್ತು ಬಿ.ಕೆ. ಮಾಡೆಲ್ ಹೈಸ್ಕೂಲ್ ನೂರು ವರ್ಷಗಳ ಪೂರೈಸಿರುವ ಹಿನ್ನೆಲೆ ಈಚೆಗೆ ಉಷಾತಾಯಿ ಗೋಗಟೆ ವಿದ್ಯಾಲಯದ ಆವರಣದಲ್ಲಿ ಹಳೆಯ ವಿದ್ಯಾರ್ಥಿನಿಯರ ಸ್ನೇಹಮೇಳ ಜರುಗಿತು. ಹಳೆಯ ವಿದ್ಯಾರ್ಥಿನಿಯರು ಶಾಲಾ ದಿನಗಳ ನೆನಪುಗಳನ್ನು ಹಂಚಿ ಕೊಂಡರು. ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಹಳೆಯ ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು. ಪುಣೆ, ಮುಂಬೈ, ಕೊಲ್ಲಾಪುರ, ಬೆಂಗಳೂರು, ಯಲ್ಲಾಪುರ ಮುಂತಾದ ಸ್ಥಳಗಳಿಂದ ಹಳೆಯ ವಿದ್ಯಾರ್ಥಿನಿಯರು ಆಗಮಿಸಿದ್ದರು. ಸೊಸೈಟಿ ಅಧ್ಯಕ್ಷ ಅವಿನಾಶ ಪೊತದಾರ, ಗೌರವ ಕಾರ್ಯದರ್ಶಿ ಶ್ರೀನಿವಾಸ ಶಿವಣಗಿ, ಹಳೆಯ ವಿದ್ಯಾರ್ಥಿನಿಯರ ಸಂಘದ ಅಧ್ಯಕ್ಷೆ ಲಲಿತಾ ಮದಿಹಳ್ಳಿ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಚಿಂತಾಮಣಿ ಗ್ರಾಮೋಪಾಧ್ಯಾಯ, ವಿ.ಆರ್.ಗುಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net