ನೈಸರ್ಗಿಕ ಜತ್ತಿನ ಅನುಭವ ಪಡೆದ ವಿದ್ಯಾರ್ಥಿಗಳು

Students experiencing natural weaving
ವಿಜಯಪುರದ ಬಿಎಲ್​ಡಿಇ ಸಂಸ್ಥೆಯ ಸಂಗನಬಸವ ಮಹಾಸ್ವಾಮೀಜಿ ಔಷಧೀಯ ವಿಾನ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಡಿ. ಫಾಮ್​ರ್ ವಿದ್ಯಾರ್ಥಿಗಳು ಇಲ್ಲಿನ ಎವಿಎಸ್​ ಆಯುರ್ವೇದ ಮಹಾವಿದ್ಯಾಲಯದ ಶ್ರೀವನಕ್ಕೆ ಭೇಟಿ ನೀಡಿ ೇತ್ರ ಅಧ್ಯಯನ ನಡೆಸಿದರು. ಡಾ. ಗುರುದೇವಿ ಪಾಟೀಲ, ಡಾ. ಸಿ. ಮಲ್ಲಿಕಾರ್ಜುನ ಶೆಟ್ಟಿ, ಡಾ. ಬಸವರಾಜ ಹುನಸಗಿ ಮತ್ತಿತರರಿದ್ದರು.
Published on

ವಿಜಯಪುರ: ನಗರದ ಬಿಎಲ್​ಡಿಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಔಷಧೀಯ ವಿಾನ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಡಿ. ಫಾಮ್​ರ್ ವಿದ್ಯಾರ್ಥಿಗಳು ಇಲ್ಲಿನ ಎವಿಎಸ್​ ಆಯುರ್ವೇದ ಮಹಾವಿದ್ಯಾಲಯದ ಶ್ರೀವನಕ್ಕೆ ಶುಕ್ರವಾರ ಭೇಟಿ ನೀಡಿ ೇತ್ರ ಅಧ್ಯಯನ ನಡೆಸಿದರು.

ಸ್ಥಳಿಯ ಬಾಗಲಕೋಟೆ ರಸ್ತೆಯಲ್ಲಿನ ಎವಿಎಸ್​ ಆಯುರ್ವೇದ ಕಾಲೇಜಿಗೆ ಭಾರತೀಯ ಔಷಧ ಪರಿಷತ್ತಿನ ಡಿಪ್ಲೊಮಾ ಕೋರ್ಸಿನ ಶೈಣಿಕ ಚಟುವಟಿಕೆ ಭಾಗವಾಗಿ ವಿದ್ಯಾರ್ಥಿಗಳು ತೆರಳಿ ನೈಸರ್ಗಿಕ ಜಗತ್ತಿನ ಅನುಭವ ಪಡೆದರು. ಹಲವು ಔಷಧೀಯ ಸಸ್ಯಗಳನ್ನು ವೀಸಿ ತರಗತಿ ಕೊಠಡಿಗಳಲ್ಲಿ ತಾವು ಪುಸ್ತಕಗಳಲ್ಲಿ ಓದಿದ ವಿಷಯ ಮತ್ತು ಇಲ್ಲಿನ ನಿಸರ್ಗದಲ್ಲಿರುವ ಔಷಧೀಯ ಸಸ್ಯಗಳ ಕುರಿತು ಮನನ ಮಾಡಿಕೊಂಡರು.

ಎವಿಎಸ್​ ಆಯುರ್ವೇದ ಕಾಲೇಜಿನ ಶ್ರೀವನದ ಅಧಿಕಾರಿ ಡಾ. ಗುರುದೇವಿ ಪಾಟೀಲ ವಿದ್ಯಾರ್ಥಿಗಳಿಗೆ ಹಲವು ಬಗೆಯ ಔಷಧೀಯ ಸಸ್ಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಔಷಧೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಿ. ಮಲ್ಲಿಕಾರ್ಜುನ ಶೆಟ್ಟಿ, ನೈಸರ್ಗಿಕ ಔಷಧ ವಿಾನ ವಿಭಾಗದ ಡಾ. ಬಸವರಾಜ ಹುನಸಗಿ, ಸಹಾಯಕ ಪ್ರಾಧ್ಯಾಪಕ ಅಜಯ ಶಹಾಪುರ, ಸಂದೀಪ ಉಮರಾಣಿ, ಶಿವರಾಜ ಕಾಪಸೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net