

ಸರ್ಜಾಪುರ : ಬೆಂಗಳೂರಿನಬಿಎಂಎಸ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಶಾಲೆಯಲ್ಲಿ ಇತ್ತೀಚೆಗೆ ಶ್ರೀ ಮಾರುತಿ ಚಾರಿಟೇಬಲ್ ಟ್ರಸ್ಟ್ ಮತ್ತು ವಿಶ್ವ ಮಾನವ ಸಮಾಜ ಸೇವಾ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯಮಟ್ಟದ ಯೋಗ ಚಾಂಪಿಯನ್ಶಿಪ್,ಅಂತಾರಾಷ್ಟ್ರೀಯ ಯೋಗ ಆಯ್ಕೆ ಮತ್ತು ಶ್ರೀಕಲ್ಪ ಸಮೂಹ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಯೋಗ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ವೆಲ್ ಸ್ಟ್ರಿಂಗ್ ಅಕಾಡೆಮಿ ಶಾಲೆಯ 17 ವಿದ್ಯಾರ್ಥಿಗಳ ಪೈಕಿ 3 ವಿದ್ಯಾರ್ಥಿಗಳಿಗೆ ಯೋಗ ಶಿಲ್ಪಾ ಅವಾರ್ಡ್ ನೀಡಿ ಗೌರವಿಸಲಾಯಿತು.
ಆಯ್ಕೆಯಾದ ವಿದ್ಯಾರ್ಥಿಗಳು : ನಯಾರ ಶೆಟ್ಟಿ, ವೈಷ್ಣವಿ, ಯಾತ್ರ, ದೇವಿಕಾ, ತನ್ವಿತಾ, ವ್ಯಾಸ, ಹನಿಕಾ, ಇವಾ ಪ್ರಖ್, ಕೈರವಿ, ತುಷಾರ, ಎಂಜಲ್, ವೇದಶ್ರೀ, ಅದೀರಾ, ಮೈರಾ, ನಿಹಾರಿಕಾ, ಶುಭಾ, ಅನುಮಿತಾ, ನಿಶ್ಚಿತ್, ಪ್ರಣವಿ, ಇಶಾಂಕ್.ವೆಲ್ ಸ್ಟಿಂಗ್ ಅಕಾಡೆಮಿ ನಿರ್ದೇಶಕರಾದ ಅಕಿಲೇಶ್ವರ್ ರೆಡ್ಡಿ, ದಿನೇಶ್ ರೆಡ್ಡಿ, ಅಕಾಡೆಮಿ ಚೇರ್ಮನ್ ಪ್ರಸಾದ್ ರೆಡ್ಡಿ, ವ್ಯವಸ್ಥಾಪಕ ಸಂಜಯ್ಯ ರೆಡ್ಡಿ, ದೈಹಿಕ ಶಿಕ್ಷಣ ಶಿಕ್ಷಕ ಶಶಿಕಾಂತ್ ರಾಜ್ ಅರಸ್, ತರಬೇತುದಾರ ವಿಶಾಲ್ ಗೌಡ ಇದ್ದರು.