

ಪಡುಬಿದ್ರಿ: ಹೆಜಮಾಡಿ ಕಾಮಿನಿ ಹೊಳೆ ಹಾಗೂ ಸಮುದ್ರ ಸೇರುವ ಮುಟ್ಟಳಿವೆ ಬಳಿ ಈಜಲು ತೆರಳಿದ್ದ ಹೆಜಮಾಡಿ ಎನ್‌ಎಸ್ ರಸ್ತೆಯ ಸುಲೈಮಾನ್ ಕಬೀರ್ ಎಂಬುವರ ಪುತ್ರ ಮೋಸಿನ್(16) ಮತ್ತು ಇದೇ ಪರಿಸರದ ರಮ್ಲಾನ್ ಎಂಬುವರ ಪುತ್ರ ಮೊಹಮ್ಮದ್ ರಾಯಿಸ್ (16) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಜತೆಗಿದ್ದ ಮೊಹಮ್ಮದ್ ನಬೀಲ್ ಎಂಬಾತನನ್ನು ರಕ್ಷಿಸಲಾಗಿದೆ.
ಮೂವರು ವಿದ್ಯಾರ್ಥಿಗಳು ಗುರುವಾರ ಸಾಯಂಕಾಲ 4 ಗಂಟೆಗೆ ಮುಟ್ಟಲಿವೆ ಬಳಿ ಈಜಲು ತೆರಳಿದ್ದರು. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.