

ಯಲಬುರ್ಗಾ: ವಿದ್ಯಾರ್ಥಿಗಳು ದುಶ್ಚಟಕ್ಕೆ ದಾಸರಾಗಿ ಆರೋಗ್ಯ ಹಾಳು ಮಾಡಿಕೊಳ್ಳದಿರಿ ಎಂದು ಪಿಎಸ್‌ಐ ಎಸ್.ಪಿ.ನಾಯ್ಕ ಹೇಳಿದರು.
ಇದನ್ನೂ ಓದಿ:ಮಡಿಕೇರಿಯಲ್ಲಿ ರೋಟರಿ ರಸ್ತೆ ಸುರಕ್ಷತಾ ಅಭಿಯಾನ
ತಾಲೂಕಿನ ಬೇವೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಂಬಾಕು ದುಷ್ಪರಿಣಾಮ, ಅರಿವು ಕಾರ್ಯಕ್ರಮ ಹಾಗೂ ರಸ್ತೆ ಸುರಕ್ಷತಾ ಅಭಿಯಾನದಲ್ಲಿ ಮಾತನಾಡಿದರು. ಯುವಕರು ಮಾದಕ ದ್ರವ್ಯ ಸೇವಿಸಿ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ. ಮನೆಯ ಪರಿಸರ, ಸ್ನೇಹ ಸಂಬಂಧಗಳು ಒಳ್ಳೆಯ ಮಾರ್ಗದಲ್ಲಿ ನಡೆಯಲು ಪ್ರೇರಣೆಯಾಗಬೇಕು. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿ ಉತ್ತಮ ಬದುಕು ಕಟ್ಟಿಕೊಳ್ಳಿ. ಸಾಧನೆಗೆ ದೃಢ ಸಂಕಲ್ಪ, ಶ್ರದ್ಧೆ ಅಗತ್ಯ. ಪಾಲಕರು ನೀಡಿದ ಅವಕಾಶಗಳನ್ನು ಬಳಸಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಎಂದರು.
ಪ್ರಾಚಾರ್ಯ ಗೋಪಾಲಕೃಷ್ಣ, ಉಪನ್ಯಾಸಕರಾದ ಜಿ.ಎ.ಹಿರೇಮಠ, ಶೇಖ್‌ಬಾಬು, ಪೊಲೀಸ್ ಸಿಬ್ಬಂದಿ ಬಾಲಪ್ಪ, ರವಿ ರಾಠೋಡ, ಬಸವರಾಜ ಇತರರಿದ್ದರು.