ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ

mela
Published on

ಹುಬ್ಬಳ್ಳಿ: ವಿದ್ಯಾರ್ಥಿಗಗಳಿಗೆ ವಿಜ್ಞಾನ ವಿಷಯ ಕಠಿಣವೆನಿಸಿಕೊಳ್ಳದೆ ಸುಲಭವಾಗಿ ಕಲಿಯುವಂತಾಗಬೇಕು. ಹಾಗೆಯೇ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆಯ ಹುಬ್ಬಳ್ಳಿ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಸ್. ಶಿವಳ್ಳಿಮಠ ಹೇಳಿದರು.

ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ, ಏಕಸ್ ಪ್ರತಿಷ್ಠಾನ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಅನುಸೂಯಾ ಮೆಳ್ಳಿಗೇರಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಇನ್ನೋವೇಶನ್ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಮೇಳದಲ್ಲಿ ಎಲ್ಲ ವಿದ್ಯಾರ್ಥಿಗಳು ನಾವಿನ್ಯತೆಯೊಂದಿಗೆ ಮಾದರಿಗಳನ್ನು ತಯಾರಿಸಿದ್ದು, ವೈಜ್ಞಾನಿಕತೆಯ ಜತೆಗೆ ಅನ್ವೇಷಣಾ ಮನೋಭಾವ ಬೆಳೆಸಿಕೊಳ್ಳಬೆಕೆಂದು ಕರೆ ನೀಡಿದರು.

ಅಗಸ್ತ್ಯ ಪ್ರತಿಷ್ಠಾನದ ಪ್ರಾದೇಶಿಕ ಮುಖ್ಯಸ್ಥೆ ಡಾ. ಬಬಿತಾ ಪ್ರಾಸ್ತಾವಿಕವಾಗಿ ಮಾತನಾಡಿ ಇನ್ನೋವೇಶನ್ ಮೇಳವನ್ನು ಆಯ್ದ ಶಾಲೆಗಳ

ವಿದ್ಯಾರ್ಥಿಗಳಿಗೆ ಮಾತ್ರ ಆಯೋಜಿಸಿದ್ದು, ಇನ್ನು ಮುಂದಿನ ಹಂತದಲ್ಲಿ ಬೇರೆ ಶಾಲೆಯ ವಿದ್ಯಾರ್ಥಿಗಳಿಗೂ ಈ ಕಾರ್ಯಕ್ರಮವನ್ನು ವಿಸ್ತರಿಸಲಿದ್ದೇವೆ ಎಂದು ಹೇಳಿದರು.

ಪ್ರತಿಷ್ಠಾನದ ವಲಯ ಮುಖ್ಯಸ್ಥ ಶಿವಾನಂದ ಚಲವಾದಿ, ಮುಖ್ಯೋಧ್ಯಾಪಕಿ ಜೆ.ಸಿ.ಕೊಲಕಾರ, ಮಾತನಾಡಿದರು. ಜಯಮ್ಮ ಕಳ್ಳಿಮನಿ, ಬಸವರಾಜ ರಾಮದುರ್ಗ, ಫಕ್ಕೀರೇಶ್ವರ ಮಡಿವಾಳರ, ಶಂಕರ ಕುರುಬರ, ಪೂಜಾ ಹಿರೇಮಠ, ಸಿದ್ಧಾರೂಢ ಕೋಟೂರ, ಸುಷ್ಮಾ ಅಪ್ಪಣ್ಣವರ, ಇತರರು ಇದ್ದರು. 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೇಳವನ್ನು ವಿಕ್ಷಿಸಿದರು.

ಉತ್ತಮ ಮಾದರಿ

ಮಂಜುನಾಥನಗರ ಹಿ.ಪ್ರಾ. ಶಾಲೆಯ ಸರಸ್ವತಿ ಮತ್ತು ಸ್ವಾತಿ, ಬಂಕಾಪುರ ಚೌಕ್ ಹಿ.ಪ್ರಾ. ಶಾಲೆಯ ಸಾಯಿನಾಥ ಮತ್ತು ಕವನ

ನೂಲ್ವಿ ಪ್ಲಾಟ್ ಹಿ.ಪ್ರಾ. ಶಾಲೆಯ ಅನುಶ್ರೀ ಮತ್ತು ತನುಶ್ರೀ ತಯಾರಿಸಿದ ಮಾದರಿಗೆ ಉತ್ತಮ ಮಾದರಿ ಪ್ರಶಸ್ತಿ ನೀಡಲಾಯಿತು.

ಭಾಗವಹಿಸಿದವರಿಗೆ ಪದಕ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.

,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net