

ನೆಲಮಂಗಲ : ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಾಮಾಜಿಕ ಚಿಂತನೆ ಮತ್ತು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ರೋಟರಿ ಅಧ್ಯಕ್ಷ ಜಿ.ಆರ್.ನಾಗರಾಜು ತಿಳಿಸಿದರು. ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಬಸವೇಶ್ವರ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರಿ ಸಂಸ್ಥೆಯಿಂದ ಆಯೋಜಿಸಿದ್ದ ರೋಟರಿ ಇಂಟರಾಕ್ಟ್ ಕ್ಲಬ್ನ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಸಾಮಾಜಿಕ ಚಿಂತನೆ ಮತ್ತು ನಾಯಕತ್ವ ಗುಣ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ನಾಯಕರಾಗಲು ಮತ್ತು ಆತ್ಮಸ್ಥೆರ್ಯ ತುಂಬಲು ಸಹಕಾರಿಯಾಗಿವೆ. ಪ್ರಸ್ತುತ ವಿದ್ಯಾರ್ಥಿಗಳಿಗೆ ಸಮಾಜ ಸೇವೆಯ ಮನೋಭಾವ ಹಾಗೂ ನಾಯಕತ್ವದ ಗುಣ ಅತ್ಯಗತ್ಯ. ನಮ್ಮ ಸಂಪಾದನೆಯಲ್ಲಿ ಅಲ್ಪವನ್ನಾದರೂ ಅಗತ್ಯವಿರುವವರಿಗೆ ಹಂಚಬೇಕು. ರೋಟರಿ ಸಂಸ್ಥೆ ಮಾಡುತ್ತಿರುವ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಿ ಎಂದು ಹೇಳಿದರು. ಪ್ರಾಂಶುಪಾಲ ಡಾ.ರುದ್ರಮಹೇಶ್ ಮಾತನಾಡಿ, ಶಿಕ್ಷಣ ಸಂಸ್ಥೆ ಹಾಗೂ ರೋಟರಿಯ ವಿಚಾರಧಾರೆಗಳು ಒಂದೇ ಆಗಿದ್ದು, ಮಕ್ಕಳಲ್ಲಿ ಸಮಾಜಮುಖಿ ಆಲೋಚನೆಗಳು ಅಗತ್ಯ ಎಂದರು.
ಪದಗ್ರಹಣ ಸ್ವೀಕಾರ: ನಗರದ ಶ್ರೀ ಬಸವೇಶ್ವರ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ರೋಟರಾಕ್ಟ್ ಅಧ್ಯೆಯಾಗಿ ನಯನಾ, ಕಾರ್ಯದರ್ಶಿಯಾಗಿ ನಂದಿತಾ ಹಾಗೂ ಬಸವೇಶ್ವರ ಇಂಗ್ಲೀಷ್ ಹೈಸ್ಕೂಲ್ನಲ್ಲಿ ಇಂಟರಾಕ್ಟ್ ಅಧ್ಯಕ್ಷನಾಗಿ ಸುಜಿತ್ಸಾಯಿ, ಕಾರ್ಯದರ್ಶಿಯಾಗಿ ತನುಷ್ ಸೇರಿ ಶ್ರೀ ಮಂಜುನಾಥ ಫ್ರೌಢಶಾಲೆಯ ಇಂಟರಾಕ್ಟ್ ಅಧ್ಯಕ್ಷನಾಗಿ ತೇಜುಮಯಿ, ಕಾರ್ಯದರ್ಶಿಯಾಗಿ ಆರ್.ಮದೀಹ ಪದಗ್ರಹಣ ಮಾಡಿದರು.