ವಿದ್ಯಾರ್ಥಿಗಳು ಸಾಹಿತ್ಯ ಆಸಕ್ತಿ ಬೆಳೆಸಿಕೊಳ್ಳಿ

snd chutuku
ಸಿಂಧನೂರಿನಲ್ಲಿ ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ 116ನೇ ಜನ್ಮದಿನ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಸದಸ್ಯರು, ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಇರ್ಫಾನ್‌ಕೆ., ಶರಭಯ್ಯ, ಎಚ್.ಎಫ್. ಮಸ್ಕಿ, ಎಂ. ಭಾಸ್ಕರ್ ಇದ್ದರು.
Published on

ಸಿಂಧನೂರು: ವಿದ್ಯಾರ್ಥಿಗಳು ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಚುಟುಕು, ಕಾವ್ಯ, ಕತೆ ರಚನೆ ಮಾಡಲು ಸಹಾಯವಾಗಲಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ವೈ.ನರೇಂದ್ರನಾಥ ಹೇಳಿದರು.

ನಗರದ ಸನ್‌ರೈಸ್ ನರ್ಸಿಂಗ್ ಕಾಲೇಜ್‌ನಲ್ಲಿ ಗುರುವಾರ ಜಿಲ್ಲಾ, ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ 116ನೇ ಜನ್ಮದಿನ ಹಾಗೂ ಚುಟುಕು ವಾಚನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಡಿಮೆ ಶಬ್ದದಲ್ಲಿ ಅರ್ಥಗರ್ಭಿತವಾದ ಪದ ಕಟ್ಟುವ ಚುಟುಕು ಎಲ್ಲರಿಗೂ ಪ್ರಿಯ. ತಾಲೂಕಿನಲ್ಲಿ ಚುಟುಕು ಸಾಹಿತ್ಯ ಪರಿಷತ್ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.

ಜಿಲ್ಲಾ ಚುಸಾಪ ಗೌರವಾಧ್ಯಕ್ಷ ಬೀರಪ್ಪ ಶಂಭೋಜಿ,ಚುಸಾಪ ತಾಲೂಕು ಅಧ್ಯಕ್ಷ ಎಂ.ಭಾಸ್ಕರ್, ಕೋಶಾಧ್ಯಕ್ಷ ಶರಭಯ್ಯ, ಸನ್‌ರೈಸ್ ಕಾಲೇಜಿನ ಅಧ್ಯಕ್ಷ ಇರ್ಫಾನ್ ಕೆ. ಮಾತನಾಡಿದರು. ದಸಾಪ ನಿಕಟಪೂರ್ವ ಅಧ್ಯಕ್ಷ ಎಚ್.ಎಫ್. ಮಸ್ಕಿ, ಚುಸಾಪ ಜಿಲ್ಲಾ ಪ್ರತಿನಿಧಿ ಅಮರೇಶ ಹೂಗಾರ ಇದ್ದರು.

ನಗರಾಭಿವೃದ್ದಿ ಪ್ರಾಧಿಕಾರ ಸದಸ್ಯರಾದ ವೈ.ನರೇಂದ್ರನಾಥ, ಖಾಜಿ ಮಲ್ಲಿಕ್, ಮಮತಾ ಮೌಲಪ್ಪ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ತಿಡಿಗೋಳ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ನಾಗಪ್ಪ ಕೆಲ್ಲೂರು, ಚೆನ್ನಳ್ಳಿ ಸರ್ಕಾರಿ ಹಿಪ್ರಾ ಶಾಲೆ ಮುಖ್ಯಶಿಕ್ಷಕ ಅನಂತರಾವ್ ಅವರನ್ನು ಸನ್ಮಾನಿಸಲಾಯಿತು. ಅಶ್ವಿನಿ ಪ್ರಾರ್ಥಿಸಿದರು, ಪ್ರಾಚಾರ್ಯ ಲಾಜರ್ ಸಿರಿಲ್ ಸ್ವಾಗತಿಸಿದರು. ನವ್ಯರಾಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net