

ಚಿಕ್ಕೋಡಿ: ಸರ್ಕಾರಿ ಶಾಲೆಗೆ ಹೆಚ್ಚುವರಿ ಕೊಠಡಿ ನೀಡುವಂತೆ ಕಾಲ್ನ-ಡಿ-ಗೆ ಮೂಲ-ಕ ಪ್ರತಿಭಟನೆ ನಡೆಸಿ ಅಮಾನತುಗೊಂಡಿರುವ ರಾಯಬಾಗ ತಾಲೂಕಿನ ನಿಡಗುಂದಿ ಶಾಲೆಯ ಮುಖ್ಯಶಿಕ್ಷಕ ವೀರಣ್ಣ ಮಡಿವಾಳ ಅವರ ಅಮಾನತು ಆದೇಶ ರದ್ದು ಪಡಿಸುವಂತೆ ಶಾಲೆಯ ವಿದ್ಯಾರ್ಥಿಗಳು, ಪಾಲಕರು ಮತ್ತು ಶಾಲಾ ಸುಧಾರಣೆ ಸಮಿತಿ ಸದಸ್ಯರು ಶನಿವಾರ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ನಿಡಗುಂದಿ ಗ್ರಾಮದ ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 145 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ, ವಿದ್ಯಾರ್ಥಿಗಳಿಗೆ ಮೂರು ಕೊಠಡಿ ಮಾತ್ರ ಲಭ್ಯವಿದೆ. ಹೆಚ್ಚುವರಿ ಕೊಠಡಿಗೆ ಆಗ್ರಹಿಸಿ ಗಮನ ಸೆಳೆದಿದ್ದರು. ಪರಿಣಾಮ ಕರ್ತವ್ಯಲೋಪ ಆರೋಪದಡಿ ಇಲಾಖೆಯು ಶಿಕ್ಷಕನನ್ನು ಕೆಲಸದಿಂದ ಅಮಾನತುಗೊಳಿಸಿದೆ. ಶಾಲೆ-ಗೆ ಕೊಠ-ಡಿ ಸೇರಿ ಮೂಲಸೌಕರ್ಯ ಕೇಳುವುದು ತಪ್ಪೆ? ಶಿಕ್ಷಕ ವೀರಣ್ಣ ಮಡಿವಾಳರ ಶಾಲೆಗೆ ಮರಳಿ ಬರುವವರೆಗೂ ಶಾಲೆಗೆ ಬರುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದರು.
ವಿವಿಧೆಡೆ ಆಕ್ರೋಶ: ಶಾಲೆಗೆ ಹೆಚ್ಚುವರಿ ಕೊಠಡಿಗಾಗಿ ಪ್ರತಿಭಟನೆ ನಡೆಸಿದ ಮುಖ್ಯ-ಶಿಕ್ಷಕ ವೀರಣ್ಣ ಮಡಿವಾಳ ಅವರನ್ನು ಅಮಾನತು ಮಾಡಿರುವ ಕುರಿತು ಜೆಡಿಎಸ್ ಪಕ್ಷ ತನ್ನ ಫೇಸ್ಬುಕ್ ಖಾತೆಯಲ್ಲಿ ಶಾಲೆಗೆ ಕೊಠಡಿ ಕೇಳಿದ್ದು, ಮಹಾಪರಾದವೇ' ಎಂಬ ಪೋಸ್ಟ್ ಹಂಚಿ-ಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಜತೆಗೆ ಸಾಹಿತಿಗಳು, ಶಾಲಾ ಶಿಕ್ಷಕರ ಸಂ, ಶಾಲೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಅಮಾನತು ಕ್ರಮ ಖಂಡಿಸಿದ್ದಾರೆ.
ನಿಡಗುಂದಿ ಶಾಲೆಯ ಮುಖ್ಯಶಿಕ್ಷಕ ವೀರಣ್ಣ ಮಡಿವಾಳ ಶಾಲೆಯ ಅಭಿವೃದ್ಧಿಗೆ ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಅವರ ಬೇಡಿಕೆ ನ್ಯಾಯಯುತವಾಗಿದ್ದು, ಕೂಡಲೇ ಅಮಾನತು ಆದೇಶ ಹಿಂಪಡೆಯಬೇಕು. ಮಂಗಳವಾರ ಒಳ-ಗಾಗಿ ಅಮಾನತು ಆದೇಶ ಹಿಂಪಡೆಯದಿದ್ದರೆ, ಗ್ರಾಮಸ್ಥರೆಲ್ಲ ಸೇರಿ ಉಗ್ರ ಹೋರಾಟ ಕೈಗೊಳ್ಳಲಾಗುವುದು. ಲಕ್ಷ$್ಮಣ ಗವಾನೆ ತಾಪಂ ಮಾಜಿ ಅಧ್ಯಕ್ಷ