

ಬೆಳಗಾವಿ: ತಾಲೂಕಿನ ಕೊಂಡಸಕೊಪ್ಪ ಗ್ರಾಮಕ್ಕೆ ಸಮರ್ಪಕ ಬಸ್ ಸೌಕರ್ಯವಿಲ್ಲ ಎಂದು ಆಕ್ರೋಶಗೊಂಡ ವಿದ್ಯಾರ್ಥಿಗಳು ಸಮೀಪದ ರಾಷ್ಟ್ರೀಯ ಹೆದ್ದಾರಿ&4ರಲ್ಲಿ ಕೆಲಹೊತ್ತು ವಾಹನ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ರೈತರು ಸುವರ್ಣವಿಧಾನಸೌಧ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೃಷಿ ಜಮೀನನ್ನೇ ನೀಡಿದ್ದಾರೆ. ಆದರೆ, ಬಸ್ ಸೌಕರ್ಯವಿಲ್ಲದೆ ಪ್ರತಿನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಪರಿಣಾಮ ಕೆಲಗಂಟೆಗಳ ಕಾಲ ಸಂಚಾರ ಸಿಕ್ಕು ಉಂಟಾಗಿತ್ತು. ಹಿರೇಬಾಗೇವಾಡಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಕಳುಹಿಸಿದರು. ಬಳಿಕ ವಿದ್ಯಾರ್ಥಿಗಳು ಶಾಲೆಗೆ ಹೋಗುವ ಬದಲು ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ತೆರಳಿ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಪ್ರತಿಭಟಿಸಿದರು.
ಕೊಂಡೊಸಕೊಪ್ಪದ ವಿದ್ಯಾರ್ಥಿನಿ ಮಾತನಾಡಿ, ನಮ್ಮ ಊರಿಗೆ ಬೆಳಗ್ಗೆ 8 ಗಂಟೆಗೆ ಒಂದೇ ಒಂದು ಬಸ್ ಇದ್ದು ಅದು ಇಲ್ಲದಂತಾಗಿದೆ. ಇಷ್ಟು ದಿನ ಬೇರೆ ಬಸ್ ಮೂಲಕ ಶಾಲೆಗೆ ಹೋಗುತ್ತಿದ್ದೇವು. ಆದರೀಗ ಬೇರೆ ಬಸ್ನಲ್ಲಿ ವಿದ್ಯಾರ್ಥಿನಿಯರನ್ನು ಅವಾಚ್ಯವಾಗಿ ನಿಂದಿಸುತ್ತಿದ್ದಾರೆ. ಇದರಿಂದಾಗಿ ಶಾಲೆಯಲ್ಲಿ ಪರೀೆ ಇದ್ದರೂ ಹೋಗಲಾಗದೆ ಶೈಣಿಕ ಹಿನ್ನೆಡೆಯಾಗುತ್ತಿದೆ. ಹಲವು ಬಾರಿ ಗ್ರಾಮದ ಪ್ರಮುಖರು ಹೇಳಿದರೂ ಯಾವುದೇ ಪ್ರಯೋಜವಾಗಿಲ್ಲ ಎಂದರು.
ಕೊಂಡಸಕೊಪ್ಪ ಒಂದು&ಎರಡು ಕಿಲೋ ಮೀ. ಇರುವಾಗಲೇ ಬಸ್ ಇಳಿಸಿ ಹೋಗುತ್ತದೆ. ಆಗ ಮಳೆ&ಬಿಸಿಲೆನ್ನದೆ ನಡೆದುಕೊಂಡು ಹೋಗುತ್ತಿದ್ದೇವೆ. ನಮ್ಮ ಗ್ರಾಮಕ್ಕೆ ತಾಸಿಗೊಂದು ಬಸ್ ಬೇಕೇ ಬೇಕು ಎಂದು ವಿದ್ಯಾರ್ಥಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಮಧು ಗಾಡಿವಡ್ಡರ, ಲಕ್ಷಿ$್ಮ ಸೋನಪ್ಪನವರ, ರಾಜಶ್ರೀ ಸಾಂಬ್ರೆಕರ, ಮಧು ಸಾಂಬ್ರೆಕರ, ಸಂಜನಾ ಮಲತವಾಡಿ ಇತರರಿದ್ದರು.