

ಗೋಕಾಕ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಣ ನೀಡಿ ಅವರನ್ನು ಸ್ಪರ್ಧಾತ್ಮಕ ಯುಗದ ಸ್ಪರ್ಧಾಳುಗಳನ್ನಾಗಿ ಮಾಡಲು ಲಕ್ಷಿ$್ಮ ಎಜುಕೇಷನ್ ಟ್ರಸ್ಟ್ ಶ್ರಮಿಸುತ್ತಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಹೇಳಿದರು.
ನಗರದ ಶ್ರೀ ಲಕ್ಷ$್ಮಣರಾವ್ ಜಾರಕಿಹೊಳಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಕ್ರೀಡೋ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಗ್ರಾ$ಜ್ಯುವೇಷನ್ ಡೇ ಸಮಾರಂಭದ ಅಧ್ಯತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಆಧುನಿಕ ತಾಂತ್ರಿಕತೆ ಅಳವಡಿಕೆಯೊಂದಿಗೆ ಆಟದೊಂದಿಗೆ ಕಲಿಕೆಯನ್ನು ಕ್ರೀಡೋ ಪದ್ಧತಿಯೊಂದಿಗೆ ಕಲಿಸಲಾಗುತ್ತಿದೆ. ಈ ಪದ್ಧತಿಗೆ ಮಕ್ಕಳು ಸ್ಪರ್ಧಿಸಿ ಪರಿಣಾಮಕಾರಿಯಾಗಿ ಕಲಿಯುತ್ತಿದ್ದಾರೆ. ಪಾಲಕರು ಇದರ ಸದುಪಯೋಗಪಡಿಸಿಕೊಂಡು ತಮ್ಮ ಮಕ್ಕಳನ್ನು ಪ್ರತಿಭಾನ್ವಿತರನ್ನಾಗಿ ಮಾಡುವಂತೆ ಕರೆ ನೀಡಿದರು.
ಲಕ್ಷಿ$್ಮ ನವೋದಯ ಕೋಚಿಂಗ್ ಶಾಲೆಯ ವಿನಾಯಕ ಗಾಣಿಗ ಮಾತನಾಡಿ, ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪಾಲಕರ ಹಾಗೂ ಶಿಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳಿಗೆ ಪ್ರಪಂಚವನ್ನು ಪರಿಚಯಿಸಿ ಅವರ ಜ್ಞಾನ ಮಟ್ಟವನ್ನು ವದ್ಧಿಸಿ ಉತ್ತಮ ನಾಗರಿಕರನ್ನಾಗಿ ರೂಪಿಸುವುದು ನಮ್ಮೆಲ್ಲರ ಮೇಲಿದೆ ಎಂದರು.
ಸಂಸ್ಥೆಯ ಉಪಾಧ್ಯೆ ಸುವರ್ಣಾ ಭೀಮಶಿ ಜಾರಕಿಹೊಳಿ ಉದ್ಘಾಟಿಸಿದರು. ಆಡಳಿತಾಧಿಕಾರಿ ಬಿ.ಕೆ.ಕುಲರ್ಣಿ, ಮುಖ್ಯೋಪಾಧ್ಯಾಯರಾದ ಎಚ್.ವಿ.ಪಾಗ್ನೀಸ್, ಎ.ಎಂ.ಸರಕಾವಸ, ಪಿ.ವಿ.ಚಚಡಿ ಇದ್ದರು.