ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿರಲಿ

27ATN1-WEb
ಕೊಕಟನೂರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರೇಂಜರ್ಸ್ ಐಂಡ್ ರೋವರ್ಸ್ ತರಬೇತಿ ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನೆ ಆಯುಕ್ತ ಡಿ.ಬಿ.ಅತ್ತಾರ ಮಾತನಾಡಿದರು. ಸಿದ್ದರಾಮ ಯರನಾಳ, ಆರ್.ಆರ್. ಆಲುಕುಂಟೆ ಇತರರಿದ್ದರು.
Published on

ಅಥಣಿ ಗ್ರಾಮೀಣ: ವಿದ್ಯಾರ್ಥಿಗಳು ರೇಂಜರ್ಸ್ ಮತ್ತು ರೋವರ್ಸ್‌ಗೆ ಸೇರಿಕೊಳ್ಳುವುದರಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ನ ಸಹಾಯಕ ರಾಜ್ಯ ಸಂಘಟನಾ ಆಯುಕ್ತ ಡಿ.ಬಿ. ಅತ್ತಾರ ಹೇಳಿದರು. ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ರೇಂಜರ್ಸ್ ಐಂಡ್ ರೋವರ್ಸ್ ಕುರಿತು ಶನಿವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತುಬದ್ಧ ಹಾಗೂ ಆರೋಗ್ಯಯುತ ಜೀವನ ಸಾಗಿಸಬೇಕು ಎಂದರು.

ಪ್ರಾಚಾರ್ಯ ಪ್ರೊ.ಸಿದ್ದರಾಮ ಯರನಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರದ ಭವಿಷ್ಯ ಉತ್ತಮ ವಿದ್ಯಾರ್ಥಿಗಳಲ್ಲಿದೆ. ಯಾವುದೇ ಪ್ರತಿಲಾೇಕ್ಷೆ ಇಲ್ಲದೆ ದುಡಿಯುವಂತ ಸ್ವಯಂ ಸೇವಾ ಸಂಸ್ಥೆಗಳಿಂದ ಸದೃಢ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದರು.

ಆರ್.ಆರ್.ಆಲುಕುಂಟೆ, ಬಿ.ಎ.ಖೋತ, ಐಕ್ಯೂಎಸಿ ಸಂಚಾಲಕ ಡಾ.ಸತೀಶ ಮೋಹಿತೆ, ಪರಪ್ಪ ಮಗದುಮ್ಮ, ಕಪಿಲ ಕಾಂಬಳೆ, ಶ್ರೀಕಾಂತ ಪಾಟೀಲ, ಶ್ರೀಕಾಂತ ಜಾಧವ, ಡಾ.ಪ್ರಭಾಕರ ಖ್ಯಾಡಿ, ಸವಿತಾ ಚಮಕೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net