

ರಾಯಚೂರು ನಗರ ಸೇರಿದಂತೆ ಜಿಲ್ಲಾಧ್ಯಂತ ಶನಿವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಕನ್ನಡ ವಿಷಯದಲ್ಲಿ ಒಟ್ಟು ೧೭೭೨೮ ವಿದ್ಯಾರ್ಥಿಗಳು ಪರೀಕ್ಷೆ ಬರೆದು ೧೨೪೯ ಜನ ಗೈರಾಗಿದ್ದಾರೆ.
ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನಗರದ ಎಸ್‌ಆರ್‌ಪಿಎಸ್ ಪಿಯುಸಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ಹಾಗೂ ಸಿಹಿ ನೀಡಿ ಸ್ವಾಗತ ಮಾಡಿಕೊಳ್ಳಲಾಯಿತು.
ಕಾಲೇಜಿನ ಆಡಳಿತ ಮಂಡಳಿಯ ಚೇರಮನ್ ಶ್ರೀರಾಮï ಬೂಬï , ಪ್ರಾಚಾರ್ಯರಾದ ರಾಘಮ್ಮ, ಪರೀಕ್ಷಾ ಮುಖ್ಯಸ್ಥರಾದ ವೀರೇಶ್ ಸೆರೆಗಾರ್ ರವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ಗುಲಾಬಿ ನೀಡಿ ಶುಭ ಹಾರೈಸಿ , ನಿರ್ಭೀತಿಯಿಂದ ಪರೀಕ್ಷೆಯನ್ನು ಬರೆಯುವಂತೆ ಹಾಗೂ ಹಬ್ಬದ ರೀತಿಯಲ್ಲಿ ಸಂಭ್ರಮದ ರೀತಿಯಲ್ಲಿ ಇರುವಂತೆ ಧೈರ್ಯ ತುಂಬಲಾಯಿತು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಪ್ರಿಯಾಂಕ, ಪ್ರತಾಪ್, ಸಿದ್ಧಲಿಂಗ, ಮ¯್ಲÉÃಶ್ , ವೀರೇಶ ಕುಮಾರ ಸೇರಿ ಅನೇಕರು ಇದ್ದರು.