ವಿದ್ಯಾರ್ಥಿಗಳೇ ದೇಶದ ಭವಿಷ್ಯ

Students are the future of the country.
ಗುಳೇದಗುಡ್ಡದ ಭಂಡಾರಿ ಕಾಲೇಜಿನ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಉಚಿತ ಕೆಸಿಇಟಿ ಹಾಗೂ ನೀಟ್ ತರಬೇತಿ ಕಾರ್ಯಾಗಾರವನ್ನು ಪ್ರೊ. ಸಿ.ವಿ. ಏಳುಮಗ್ಗದ ಉದ್ಘಾಟಿಸಿದರು. ಗುರುಸಿದ್ಧ ಪಟ್ಟದಾರ್ಯ ಸ್ವಾಮಿಗಳು, ಕಮಲಕಿಶೋರಜಿ ಭಂಡಾರಿ ಮತ್ತಿತರರಿದ್ದಾರೆ.
Published on

ಗುಳೇದಗುಡ್ಡ: ಕಠಿಣ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಇಂದಿನ ವಿದ್ಯಾರ್ಥಿಗಳಿಗಿದ್ದು, ಅವರೇ ದೇಶದ ಭವಿಷ್ಯ ಎಂದು ವಿಜ್ಞಾನಿ ಪ್ರೊ. ಸಿ.ವಿ. ಏಳುಮಗ್ಗದ ಹೇಳಿದರು.

ಪಟ್ಟಣದ ಭಂಡಾರಿ ಕಾಲೇಜಿನ ಸಾಂಸ್ಕೃತಿಕ ಭವನದಲ್ಲಿ ಹುಬ್ಬಳ್ಳಿಯ ಸಾರಥಿ ಫೌಂಡೇಷನ್ ಹಾಗೂ ಪಿ.ಇ. ಟ್ರಸ್ಟ್ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಕೆಸಿಇಟಿ ಹಾಗೂ ನೀಟ್ ದಿಕ್ಸೂಚಿ ಎರಡು ದಿನಗಳ ಉಚಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಭಿವೃದ್ಧಿ ವಿಷಯದಲ್ಲಿ ದೇಶ ಸಾಕಷ್ಟು ಮುಂದುವರಿದರೂ ಶಿಕ್ಷಣದಲ್ಲಿ ಇನ್ನೂ 25 ವರ್ಷ ಹಿಂದಿದೆ. ಈ ಅಂತರವನ್ನು ಕಡಿಮೆ ಮಾಡುವ ಕಾರ್ಯವನ್ನು ತರಬೇತಿ ಕಾರ್ಯಾಗಾರಗಳು ಮಾಡುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಗುರುಸಿದ್ಧೇಶ್ವರ ಮಠದ ಗುರುಸಿದ್ಧ ಪಟ್ಟದಾರ್ಯ ಸ್ವಾಮಿಗಳು, ಪಿಇಟಿ ಗೌರವಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ, ಪ್ರೊ. ಸಿದ್ದಲಿಂಗಪ್ಪ ಬರಗುಂಡಿ, ಸಾರಥಿ ಫೌಂಡೇಷನ್‌ನ ಪಂಪಾಪತಿ ಹೆಗಡೆ ಮಾತನಾಡಿದರು.

ಸಂಸ್ಥೆಯ ಚೇರ್ಮನ್ ಕಮಲಕಿಶೋರಜಿ ಭಂಡಾರಿ, ರಾಠಿ ಹಾಗೂ ಕಾವಡೆ ಆಂಗ್ಲ ಮಾಧ್ಯಮ ಶಾಲೆ ಚೇರ್ಮನ್ ಅಶೋಕ ಹೆಗಡೆ, ಕೆ.ಆರ್. ರಾಯಚೂರ, ಶ್ರೀಕಾಂತ ಹುನಗುಂದಿ, ಈರಣ್ಣ ಅಲದಿ, ನಿಂಗಪ್ಪ ಯಣ್ಣಿ, ನೀಲಪ್ಪ ಗಾಣಿಗೇರ, ಮಲ್ಲಿಕಾರ್ಜುನ ತಾಂಡೂರ ಮುರಗೇಶ ಶೇಖಾ, ನಿಂಗಪ್ಪ ಅಲದಿ, ಸುರೇಶ ಸಾರಂಗಿ, ಪ್ರೊ. ಹನಮನಗಗೌಡ, ಪ್ರೊ. ಶಿಶಿರ ಜೋಶಿ, ಪ್ರೊ. ಬಸನಗೌಡ ಪಾಟೀಲ, ಪ್ರೊ. ಅನಿಲಕುಮಾರ, ಪ್ರೊ. ಪರಗೌರ ಪಾಟೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net