ವಿದ್ಯಾರ್ಥಿಗಳೇ ದೇವರು-ವಿದ್ಯಾಲಯವೇ ದೇವಾಲಯ

SANGANABASAVA SCHOOL JAYANTI
ವಿಜಯಪುರದ ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ಬಂಥನಾಳದ ಸಂಗನಬಸವ ಶ್ರೀಗಳ 124ನೇ ಜಯಂತಿ ಆಚರಿಸಲಾಯಿತು. ಪೂಜ್ಯ ಮಹಾಂತ ಸ್ವಾಮೀಜಿ, ಬಸಯ್ಯ ಎಸ್. ಹಿರೇಮಠ, ಪ್ರಾಂಶುಪಾಲ ಹೇಮಂತ ಕೃಷ್ಣ ಮತ್ತಿತರರಿದ್ದಾರೆ.
Published on

ವಿಜಯಪುರ: ಬಂಥನಾಳದ ಪೂಜ್ಯ ಸಂಗನಬಸವ ಶ್ರೀಗಳು ಶೈಕ್ಷಣಿಕ ಕಲ್ಯಾಣಕ್ಕಾಗಿ ಅಪಾರ ಶ್ರಮಿಸಿದರು. ವಿದ್ಯಾರ್ಥಿಗಳೇ ದೇವರು-ವಿದ್ಯಾಲಯವೇ ದೇವಾಲಯ ಎಂದು ಸಾರಿದರು. ಅವರ ತತ್ವ-ಆದರ್ಶಗಳನ್ನು ಬಾಲ್ಯದಿಂದಲೇ ಬೆಳೆಸಿಕೊಳ್ಳುವ ಮೂಲಕ ಸುಂದರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಕಲ್ಯಾಣ ಆಶ್ರಮದ ಪರಮ ಪೂಜ್ಯ ಮಹಾಂತ ಸ್ವಾಮೀಜಿ ಹೇಳಿದರು.

ಇಲ್ಲಿನ ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಂಥನಾಳದ ಸಂಗನಬಸವ ಶ್ರೀಗಳ 124ನೇ ಜಯಂತಿ ಆಚರಣೆಯ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ನಾಡನ್ನೆಲ್ಲ ತಮ್ಮ ಆತ್ಮಧಿತಿಯಿಂದ ಬೆಳಗಿದ ಮಹೋಜ್ವಲ ವ್ಯಕ್ತಿಗಳಲ್ಲಿ ಬಂಥನಾಳದ ಸಂಗನ ಬಸವ ಶಿವಯೋಗಿಗಳು ಚಿರಸ್ಮರಣೀಯರಾಗಿದ್ದಾರೆ. ಅವರ ಇಚ್ಛೆಯಂತೆ ಬೆಳೆದು ನಿಂತ ಸಂಗನಬಸವ ವಸತಿ ಶಾಲೆ ಮತ್ತು ಕಾಲೇಜು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿದ್ಧೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಎಸ್. ಹಿರೇಮಠ ಮಾತನಾಡಿ, ಸಂಗನಬಸವ ಶಿಕ್ಷಣ ಸಂಸ್ಥೆ ಹುಟ್ಟಿ ಬೆಳೆಯಲು ಬಂಥನಾಳ ಶ್ರೀಗಳು ಪ್ರೇರಕ ಶಕ್ತಿಯಾಗಿದ್ದರು. ಇಡೀ ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ದಿವ್ಯಪುರಷ. ಅವರು ಶಿಕ್ಷಣ ಕ್ಷೇತ್ರದಲ್ಲಿ ಧ್ರುವತಾರೆ ಇದ್ದಂತೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷಕಿ ಸೌಂದರ್ಯ ಹಿರೇಮಠ, ವಿದ್ಯಾರ್ಥಿನಿ ಐಶ್ವರ್ಯ ಚನ್ನಾಲ, ತನುಶ್ರೀ ಡಂಬಳ, ಕಮಲಾಕ್ಷಿ ಹಜೇರಿ, ವಿದ್ಯಾರ್ಥಿ ಪೃಥ್ವಿ ಜೆ ಕಾರ್ಯಕ್ರಮ ನಿರ್ವಹಿಸಿದರು.

ಪ್ರಾಂಶುಪಾಲ ಹೇಮಂತ ಕೃಷ್ಣ ಸ್ವಾಗತಿಸಿ, ಪರಿಚಯಿಸಿದರು. ಪ್ರಾಚಾರ್ಯೆ ಶರ್ಮಿಳಾ ಹೇಮಂತ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪಪ್ರಾಚಾರ್ಯ ಅಣ್ಣಪ್ಪ ಶಿರೂರ ಆಡಳಿತಾತ್ಮಕ ಪ್ರಕಟಣೆಗೈದರು. ಶಿಕ್ಷಕಿ ಗೀತಾ ಸಜ್ಜನ ಇ-ಬುಲೆಟಿನ್ ಬಿಡುಗಡೆಯ ನಿರೂಪಣೆ ಮಾಡಿದರು. ಸಮಾರಂಭದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಪ್ರಕಾರದ ಮನೋರಂಜನಾ ಕಾರ್ಯಕ್ರಮಗಳು ಜರಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net