

ಮಂಗಳೂರು: ಕಲಾಂಗಣ್ ಕೊಂಕಣಿಯ ಸಂಸ್ಕ್ಪ್ರತಿಯನ್ನು ಉಳಿಸಿ ಬೆಳೆಸುವ ಕೊಂಕಣಿಯ ನೋಹನ ನೌಕೆ. ಇಲ್ಲಿಗೆ ಬರುವುದೇ ಒಂದು ಸಂಭ್ರಮ. ಇಲ್ಲಿಯ ಕಾರ್ಯಕ್ರಮಗಳು ಕೊಂಕಣಿ ಉಳಿವಿಗೆ ನಿರಂತರತೆಯನ್ನು ನೀಡಿವೆ. ಇಂದು ನತ್ಯ ಹಾಗೂ ಗಾಯನ ತರಬೇತಿ ಪಡೆದ ವಿದ್ಯಾರ್ಥಿಗಳು ಪ್ರವಾಣ ಪತ್ರ ಪಡೆಯಲಿದ್ದಾರೆ. ಅವರು ಭವಿಷ್ಯದ ಸಾಂಸ್ಕತಿಕ ರಾಯಭಾರಿಗಳು ಎಂದು ಉಜ್ವಾಡ್ ಪಾಕ್ಷಿಕದ ಸಂಪಾದಕ ಆಲ್ವಿನ್ ಸಿಕ್ವೇರಾ ಹೇಳಿದರು.
ಶಕ್ತಿನಗರದ ಕಲಾಂಗಣದಲ್ಲಿ ವಾಂಡ್ ಸೊಭಾಣ್ ಸಂಸ್ಥೆ ಆಯೋಜಿಸಿದ ಸುರ್ ಸೊಭಾಣ್ ಗಾಯನ ಮತ್ತು ಬಾಯ್ಲಾ ಹೊಪ್ ನತ್ಯ ತರಬೇತಿ ಪಡೆದ ಮಕ್ಕಳಿಗೆ ಪ್ರವಾಣ ಪತ್ರ ವಿತರಿಸಿ ವಾತನಾಡುತ್ತಿದ್ದರು.
ಸುರ್ ಸೊಭಾಣ್ 60 ಗಂಟೆಗಳ ಹಿಂದೂಸ್ತಾನಿ ಸಂಗೀತ ಮತ್ತು ಕೊಂಕಣಿ ಹಾಡುಗಾರಿಕೆ ಬಗ್ಗೆ ತರಬೇತಿಯಾದರೆ, ಬಾಯ್ಲಾ ಹೊಪ್ ಕೊಂಕಣಿಯ ಬಾಯ್ಲಾ ನತ್ಯ ಪ್ರಕಾರ ಮತ್ತು ಪಾಶ್ಚಿವಾತ್ಯ ಹಿಪ್ ಹೊಪ್ ನತ್ಯದ 40 ಗಂಟೆಗಳ ತರಬೇತಿಯಾಗಿತ್ತು. ಸುರ್ ಸೊಭಾಣ್ ವಿದ್ಯಾರ್ಥಿಗಳು ಮೌಖಿಕ್ ಹಾಗೂ ಲಿಖಿತ ಪರೀಕ್ಷೆಯನ್ನು ಎದುರಿಸಿದ್ದರು. ಸುರ್ ಸೊಭಾಣ್‌ಗೆ 70 ವಿದ್ಯಾರ್ಥಿಗಳು ಹಾಗೂ ಬಾಯ್ಲಾ ಹೊಪ್‌ಗೆ 27 ಯುವಜನರು ಹೆಸರು ನೋಂದಾಯಿಸಿದ್ದರು ಎಂದರು.
ವಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಕಲಿಕೆಯನ್ನು ಮುಂದುವರಿಸಬೇಕು. ಹಾಗೂ ಶ್ರೇಫ್ಠಿತೆಯತ್ತ ನಡೆಯಬೇಕು ಎಂದರು.
ತರಬೇತುದಾರ ಶಿಲ್ಪಾ ಕುಟಿನ್ಹಾ ಗಾಯನದ ಬಗ್ಗೆ ಮತ್ತು ರಾಹುಲ್ ಪಿಂಟೊ ನತ್ಯದ ತರಬೇತಿ ನಡೆದು ಬಂದ ಬಗೆ ವಿವರಿಸಿದರು.
ವಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ ಪಿಂಟೊ ಹಾಗೂ ಸುಮೇಳ್ ಸಮನ್ವಯಿ ರೈನಾ ಸಿಕ್ವೇರಾ ಉಪಸ್ಥಿತರಿದ್ದರು. ವಿತೊರಿ ಕಾರ್ಕಳ ಕಾರ್ಯಾಕ್ರಮದ ವಾಹಿತಿ ನೀಡಿದರು. ಸಹ ತರಬೇತುದಾರರಾದ ಡಿಯೆಲ್ ಡಿಸೋಜ, ಆಶ್ವಿಲ್ ಕುಲಾಸೊ ಮತ್ತು ಡೆಲಿಶಿಯಾ ಪಿರೇರಾ ಇವರನ್ನು ಗೌರವಿಸಲಾಯಿತು. ವಿಕಾಸ್ ಕಲಾಕುಲ್ ನಿರೂಪಿಸಿದರು.