

ಮುದ್ದೇಬಿಹಾಳ: ವಿದ್ಯಾರ್ಥಿಗಳಿಗೆ ಅಂತಾರಾಜ್ಯ ಶೈಣಿಕ ಪ್ರವಾಸ ಆಯೋಜಿಸುವ ಮೂಲಕ ದೇಶದ ವಿವಿಧೆಡೆ ಇರುವ ಸಂಸತಿ, ಸಾಹಿತ್ಯ, ಐತಿಹಾಸಿಕ ಮಹತ್ವ ತಿಳಿಸಿಕೊಡುವ ಪ್ರಯತ್ನ ಇಲ್ಲಿನ ಅಹಲ್ಯಾದೇವಿ ಹೋಳ್ಕರ್ ಶಿಣ ಸಂಸ್ಥೆ ಮಾಡಿದೆ.
ಪ್ರಾಚಿನ ಕಲೆಯ ಪರಿಚಯ ಮಾಡಿಸುವುದು, ಅಲ್ಲಿರುವ ಪ್ರಸಿದ್ಧ ತಾಣಗಳ ಮಾಹಿತಿ ಪಡೆದುಕೊಳ್ಳಲು ಅವಕಾಶ ಮಾಡಿಕೊಡುವ ಉದ್ಧೇಶದಿಂದ ಈ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ, ತಾಲೂಕು ಕುರುಬರ ಸಂದ ಅಧ್ಯ ಎಂ.ಎನ್.ಮದರಿ ಹೇಳಿದರು.
ವಿದ್ಯಾರ್ಥಿಗಳಿಗೆ ಅಲ್ಪೋಪಹಾರ, ಊಟ, ವಸತಿ ಸೇರಿ ಎಲ್ಲ ಸೌಕರ್ಯ ಸಂಸ್ಥೆ ವತಿಯಿಂದಲೇ ಕಲ್ಪಿಸಲಾಗಿದೆ. ಇದಕ್ಕಾಗಿ ಅಂದಾಜು 2 ಲ ರೂ. ಸಂಸ್ಥೆ ಭರಿಸಲಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ಬಸ್ಗಳನ್ನು ಒಪ್ಪಂದದ ಮೇರೆಗೆ ಪಡೆದುಕೊಳ್ಳಲಾಗಿದೆ. ಸರ್ಕಾರಿ ಬಸ್ಗಳಲ್ಲಿ ಸುರತೆ ಹೆಚ್ಚು ಇರುವ ಕಾರಣಕ್ಕಾಗಿ ಈ ಬಸ್ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಜೊತೆಗೆ ಉಪನ್ಯಾಸಕರು, ಆಡಳಿತ ಮಂಡಳಿ ನಿರ್ದೇಶಕರು, ಆಡಳಿತಾಧಿಕಾರಿಗಳು, ಪ್ರಾಚಾರ್ಯರು ತೆರಳಿದ್ದು ವಿದ್ಯಾರ್ಥಿಗಳ ಸುರತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಮಹಾರಾಷ್ಟ್ರದ ಶಿರಡಿ, ಔರಂಗಬಾದ, ಅಜಂತಾ&ಎಲ್ಹೊರಾ, ಮಧ್ಯಪ್ರದೇಶದ ಮಹೇಶ್ವರ, ಓಂಕಾರೇಶ್ವರ, ಉಜ್ಜಯಿನಿ, ಇಂದೋರ (ರಾಣಿ ಅಹಲ್ಯಾದೇವಿ ಹೋಳ್ಕರ್ ಆಡಳಿತ ನಡೆಸಿದ ಊರುಗಳು), ಗುಜರಾತ್ನ ಕೆವಾಡಿಯಾ ಸ್ಥಳಗಳಿಗೆ ಭೇಟಿ ನೀಡಿ, ಮಹಾರಾಷ್ಟ್ರದ ನಾಶಿಕ್, ಚೊಂಡಿ ಮಾರ್ಗವಾಗಿ ಡಿ.23ರ ಮಧ್ಯರಾತ್ರಿ ಮರಳಿ ಪಟ್ಟಣಕ್ಕೆ ಆಗಮಿಸುವರು ಎಂದರು.
ಉಸ್ತುವಾರಿ ನೋಡಿಕೊಳ್ಳಲು ಸಂಸ್ಥೆಯ ನಿರ್ದೇಶಕ ಕಿರಣ್ ಮದರಿ ಅವರನ್ನು ತಂಡದ ಜೊತೆ ಕಳಿಸಲಾಗಿದೆ. 172 ವಿದ್ಯಾರ್ಥಿಗಳ ಮಾರ್ಗದರ್ಶನ ಮತ್ತು ಸುರತೆಗಾಗಿ ಆಡಳಿತಾಧಿಕಾರಿ ಬಿ.ಜಿ.ಬಿರಾದಾರ ಸೇರಿ 28 ಪುರುಷ, 9 ಮಹಿಳಾ ಸಿಬ್ಬಂದಿ ತಂಡದಲ್ಲಿದ್ದಾರೆ ಎಂದು ತಿಳಿಸಿದರು.
ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ನ ನಿರ್ದೇಶಕಿ ಶ್ರೀದೇವಿ ಮದರಿ, ಸಂಸ್ಥೆ ನಿರ್ದೇಶಕ ಕಿರಣ ಮದರಿ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಬಸವರಾಜ ಬಿಜ್ಜೂರ, ಆಡಳಿತಾಧಿಕಾರಿ ಬಿ.ಜಿ.ಬಿರಾದಾರ, ಪ್ರಾಚಾರ್ಯಎಂ.ಎಂ.ಧನ್ನೂರ, ಉಪನ್ಯಾಸಕರಾದ ಎಚ್.ಎಸ್.ಗೌಡರ, ಪಿ.ಎಸ್.ಬಿರಾದಾರ, ರಂಗಸ್ವಾಮಿ ಎಸ್, ಕೆ.ಬಿ.ರೂಢಗಿ, ಪುರಸಭೆ ಮಾಜಿ ಸದಸ್ಯ ಸಂತೋಷ ನಾಯ್ಕೋಡಿ, ಆಡಳಿತ ಮಂಡಳಿಯ ರವಿ ಜಗಲಿ, ದೈಹಿಕ ಶಿಕ ರವಿ ಛಲವಾದಿ, ವೀರೇಶ ಗುಡ್ಲಮನಿ, ಪಾಲಕರು ಉಪಸ್ಥಿತರಿದ್ದರು.