ವಿದ್ಯಾರ್ಥಿಗಳ ಅರ್ಧ ಶುಲ್ಕ ಭರಿಸಲು ಮನವಿ

19 KMP 02
ಕಂಪ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಎಂ.ಪಿ.ಬಾಲಾಜಿ ಅವರು ಶಾಸಕ ಜೆ.ಎನ್.ಗಣೇಶ್‌ಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಭಟ್ಟ ಪ್ರಸಾದ್, ಎಂ.ಉಸ್ಮಾನ್, ಬಿ.ನಾರಾಯಣಪ್ಪ, ವಿ.ರಘುನಾಯಕ, ಆಟೋ ರಾಘವೇಂದ್ರ ಇತರರಿದ್ದರು.
Published on

ಕಂಪ್ಲಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ 2024-25ನೇ ಸಾಲಿನ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಯ 3 ಕೋಟಿ ರೂ. ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ ಶನಿವಾರ ಭೂಮಿಪೂಜೆ ನೆರವೇರಿಸಿದ ಸಂದರ್ಭದಲ್ಲಿ ಪ್ರಾಚಾರ್ಯ ಎಂ.ಪಿ.ಬಾಲಾಜಿ ಮನವಿ ಸಲ್ಲಿಸಿದರು.

ಪ್ರಾಚಾರ್ಯ ಎಂ.ಪಿ.ಬಾಲಾಜಿ ಮಾತನಾಡಿ, 2023-24ನೇ ಸಾಲಿನಲ್ಲಿ ಬಿಎಸ್ಸಿ ಪದವಿ ಪ್ರಾರಂಭಿಸಲು ಅನುಮತಿ ದೊರಕಿದ್ದರೂ ನಾನಾ ಕಾರಣಗಳಿಂದ ಆರಂಭಗೊಂಡಿದ್ದಿಲ್ಲ. ದಾಖಲಾತಿ ಆಂದೋಲನದಲ್ಲಿ ಮೊದಲು ದಾಖಲಾಗುವ 10ವಿದ್ಯಾರ್ಥಿಗಳಿಗೆ ಅರ್ಧ ಶುಲ್ಕ ವಿನಾಯಿತಿ ನೀಡುವುದಾಗಿ ಪ್ರಕಟಿಸಿತ್ತು.

ನಿಮ್ಮ ಪ್ರೇರಣೆಯಿಂದ ಪ್ರಸಕ್ತ ಸಾಲಿನಲ್ಲಿ ಬಿಎಸ್ಸಿಗೆ 28ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ. ಮೊದಲ ಹತ್ತು ವಿದ್ಯಾರ್ಥಿಗಳ ಅರ್ಧ ಶುಲ್ಕ 33,562ರೂ. ಒದಗಿಸಿಕೊಡುವಂತೆ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net