

ಚಿಕ್ಕೋಡಿ: ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು ಎಂದು ಡಾ.ಶ್ರೇಯಲ ಶಹಾ ಹೇಳಿದರು.
ಪಟ್ಟಣದ ಸಿಎಲ್‌ಇ ಸಂಸ್ಥೆಯ ಎಂ.ಕೆ.ಕವಟಗಿಮಠ ಕನ್ನಡ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ವಿಭಾಗಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಗುರಿ ಹೊಂದಿರಬೇಕು. ಅಂದಾಗ ಸಾಧನೆ ಸುಲಭವಾಗಲಿದೆ ಎಂದರು.
ಆಡಳಿತಾಧಿಕಾರಿ ಸಾಗರ ಬಿಸ್ಕೋಪ್ ಮಾತನಾಡಿ, ವಿದ್ಯಾರ್ಥಿಗಳು ಸೋಲು-ಗೆಲುವಿಗೆ ಕಿವಿಗೊಡದೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು. ಸಂಸ್ಥೆಯ ನಿರ್ದೇಶಕ ಶಿವಾನಂದ ಚೊನ್ನದ, ಬಿ.ಡಿ.ರೋಖಡೆ ಮಾತನಾಡಿದರು. ಮುಖ್ಯ ಶಿಕ್ಷಕ ಡಿ.ಎಸ್.ಕೋಳಿ ಇತರರು ಇದ್ದರು. ಸ್ನೇಹಾ ಕರಿಸಿದ್ಧಗೋಳ ಹಾಗೂ ಪ್ರಸನ್ನ ಅಂಗಡಿ ನಿರೂಪಿಸಿದರು. ರಾಮು ಮಾಳಿ ವಂದಿಸಿದರು.