ವಿದ್ಯಾರ್ಥಿಗಳು ಕ್ರಿಯಾಶೀಲತೆ ಅಳವಡಿಸಿಕೊಳ್ಳಲಿ,

22GKK2
Published on

ಗೋಕಾಕ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಕ್ರಿಯಾಶೀಲತೆ, ಚಿಂತನೆ ಅಳವಡಿಸಿಕೊಂಡು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ನಿರಂತರ ಪ್ರಯತ್ನ ಹಾಗೂ ಪರಿಶ್ರಮದಿಂದ ಸಾಧನೆ ಸಾಧ್ಯವಾಗುತ್ತದೆ ಎಂದು ಶಿಕ್ಷಕ ಈಶ್ವರ ಮಮದಾಪುರ ಹೇಳಿದರು.

ತಾಲೂಕಿನ ತವಗ ಗ್ರಾಮದ ಮಲ್ಲಮ್ಮದೇವಿ ತವಗಮಠ ಪ್ರೌಢಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬ್ರಹ್ಮಶ್ರೀ ಆನಂದ ಸ್ವಾಮೀಜಿ ತವಗಮಠ ಮಾತನಾಡಿ, ಹಿಂದುಳಿದ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ತೆರೆಯುವ ಮೂಲಕ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಮೂಲ ಧ್ಯೇಯವಾಗಿದೆ ಎಂದರು.

ಮುಖ್ಯಶಿಕ್ಷಕ ಎ.ಜಿ.ಪಾಟೀಲ ಮಾತನಾಡಿದರು. ಎಸ್.ಎಸ್.ದೊಡ್ಡಮನಿ ವರದಿ ವಾಚಿಸಿದರು. ಗ್ರಾಪಂ ಅಧ್ಯಕ್ಷೆ ಮಾಲಾಶ್ರೀ ಮರೆಪ್ಪಗೋಳ, ಉಪಾಧ್ಯಕ್ಷ ಬಾಳಪ್ಪ ಪೂಜೇರಿ, ಪಿಕೆಪಿಎಸ್ ಅಧ್ಯಕ್ಷ ಸಿದ್ಲಿಂಗಪ್ಪ ಬಡಕುರಿ, ಉಪಾಧ್ಯಕ್ಷ ದ್ಯಾಮಪ್ಪ ಮೇತ್ರಿ, ಮುಖ್ಯಶಿಕ್ಷಕ ಎಸ್.ಎಸ್.ಡಬ್ಬನವರ, ಕೃಷ್ಣಮೂರ್ತಿ ಗಂಜಿ, ರಾಮನಗೌಡ ಪಾಟೀಲ, ಭೀರಪ್ಪ ಪೂಜೇರಿ, ಲಕ್ಷ್ಮಣ ಪ್ರಧಾನಿ, ಸತ್ತೆಪ್ಪ ಹರಿಜನ, ನಿಂಗಪ್ಪ ಟಗರಿ, ಕಲ್ಲಪ್ಪ ಹತ್ತರಕಿ, ಲಕ್ಕಪ್ಪ ಸುಲಧಾಳ, ಕೆಂಪಣ್ಣ ಚಿಕ್ಕಲದಿನ್ನಿ, ಸುಭಾಷ ಮಲಕನ್ನವರ, ರಾಜು ಗಸ್ತಿ, ಶ್ರೀಕಾಂತ ದಂಡು, ಲಕ್ಷ್ಮಣ ನಾಯ್ಕ ಇತರರಿದ್ದರು. ಪಿ.ಬಿ.ಭಜಂತ್ರಿ, ಎಲ್.ಕೆ.ಹುಣಶ್ಯಾಳ, ಎಂ.ಎಂ.ಮುಜಾವರ ನಿರ್ವಹಿಸಿದರು. ಎಸ್.ವಿ.ಮಗದುಮ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net