ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉನ್ನತಿ ಸಾಧನೆ

hbr
Published on

ಹೆಬ್ರಿ: ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉನ್ನತಿ ಸಾಧಿಸಬಹುದು. ಸಂಘಟನೆ ಮತ್ತು ಶಿಸ್ತು ಎನ್‌ಸಿಸಿಯ ಮುಖ್ಯ ಧ್ಯೇಯವಾಗಿದೆ. ಎನ್‌ಸಿಸಿ ಸೇರುವುದರಿಂದ ಸಾಮಾಜಿಕವಾಗಿ, ರಾಷ್ಟ್ರೀಯವಾದಿಯಾಗಿ ದೇಶದ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಎನ್.ಸಿ.ಸಿ ನೇವಲ್ ಕಮಾಂಡರ್ ಅಶ್ವಿನ್ ಎಂ.ರಾವ್ ಹೇಳಿದರು.

ಅವರು ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ ಇಲ್ಲಿಯ ಪ್ರೌಢಶಾಲಾ ವಿಭಾಗದ ನೂತನ ಎನ್‌ಸಿಸಿ ನೇವಲ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಕೃಷಿ ಅರ್ಥಶಾಸ್ತ್ರ ಜ್ಞರಾದ ಡಾ.ಎನ್.ಎಸ್.ಶೆಟ್ಟಿ ಮಾತನಾಡಿ, ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ನೂತನ ಎನ್‌ಸಿಸಿ ಘಟಕ ಆರಂಭವಾಗುವುದರಿಂದ ವಿದ್ಯಾರ್ಥಿಗಳಲ್ಲಿ ಇನ್ನೂ ಹೆಚ್ಚಿನ ಶಿಸ್ತು, ದೇಶಾಭಿಮಾನ ಬೆಳೆಸಲು ಅನುಕೂಲಕರವಾಗಲಿದೆ ಎಂದರು.

ನೇವಲ್ ಕಮಾಂಡರ್ ಪಿ.ಎ.ಮುಲ್ತಾನಿ, ಪಿ.ಐ.ಸ್ಟಾಪ್ ಅನಿಲ್ ದಾಸ್, ಪ್ರಾಂಶುಪಾಲ ಮಂಜುನಾಥ ಭಟ್, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಬಿ.ಎಲ್.ವಿಶ್ವಾಸ್, ಸದಸ್ಯರಾದ ಅಶೋಕ್ ಜೋಗಿ, ಮುರಳಿಧರ ಹಾಲಂಬಿ, ನಿತ್ಯಾನಂದ ನಾಯಕ್, ವಿಜಯಶೆಟ್ಟಿ, ಜ್ಯೋತಿ ಪ್ರಭು, ದೇವರಾಜ್ ಶಾಸ್ತ್ರೀ, ಲಕ್ಷ್ಮೀ ಶೆಟ್ಟಿಗಾರ್, ನಿಷಿತಾ ಶೆಟ್ಟಿ ಉಪಸ್ಥಿತರಿದ್ದರು.

ಅಧ್ಯಾಪಕ ವಿಜಯ್ ಕುಮಾರ್ ಸ್ವಾಗತಿಸಿದರು. ಎನ್‌ಸಿಸಿ ಘಟಕದ ಉಸ್ತುವಾರಿ ಮಹೇಶ್ ಕೊಟಾರಿ ವಂದಿಸಿದರು. ಅಧ್ಯಾಪಕ ರವೀಂದ್ರ ಪ್ರಭು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net