

ಲಿಂಗಸುಗೂರು: ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಯಿಸಿರುವುದನ್ನು ಖಂಡಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತಾಲೂಕು ಘಟಕ ಪ್ರತಿಭಟನೆ ನಡೆಸಿ, ಮಂಗಳವಾರ ಎಸಿ ಬಸವಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಿತು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹಾಗೂ ಬೀದರ್‌ನಲ್ಲಿ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗೆ ಜನಿವಾರ ತೆಗೆದು ಪರೀಕ್ಷೆಗೆ ಹಾಜರಾಗುವಂತೆ ಹೇಳಿ ಅನುಮತಿ ನೀಡದಿರುವುದು ವಿಪ್ರ ಬಾಂಧವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೃತ್ಯವಾಗಿದೆ.
ಜನಿವಾರ (ಯಜ್ಞೋಪವಿತ) ಧರಿಸುವ ವಿಶ್ವಕರ್ಮ, ವೈಶ್ಯ ಸೇರಿ ಇತರೆ ಸಮಾಜಗಳ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಇಂತಹ ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೇವೆಯಿಂದ ವಜಾಗೊಳಿಸಬೇಕು. ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ, ವಿದ್ಯಾರ್ಥಿಗಳು ಬಯಸಿದ ಕಾಲೇಜಿಗೆ ಪ್ರವೇಶ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಬ್ರಾಹ್ಮಣ ಮಹಾಸಭಾ ತಾಲೂಕು ಅಧ್ಯಕ್ಷ ಪ್ರಾಣೇಶ ಜೋಷಿ, ಜಿಲ್ಲಾ ಪ್ರತಿನಿಧಿ ರಮೇಶ ಕುಲಕರ್ಣಿ, ಪ್ರಮುಖರಾದ ಡಾ.ಗುರುರಾಜ ದೇಶಪಾಂಡೆ, ಪ್ರಮೋದ ಕನಕಗಿರಿ, ಜಗನ್ನಾಥ ಕುಲಕರ್ಣಿ, ಅನಂತದಾಸ, ಪ್ರಾಣೇಶ ಮುತಾಲಿಕ್, ರಾಜಶೇಖರ ಪಾಟೀಲ್, ಚನ್ನಬಸವ ಹಿರೇಮಠ, ರಾಜು ತಂಬಾಕೆ ಇತರರಿದ್ದರು.