ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡಿ: ಆಡಳಿತಾಧಿಕಾರಿ ಕೆ.ಎಸ್.ಮಹದೇವೇಗೌಡ ಸಲಹೆ

1 (2)
Published on

ಮಂಡ್ಯ: ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದ್ದು, ವಿದ್ಯಾವಂತರು ಬದುಕು ರೂಪಿಸಿಕೊಳ್ಳಲು ಹಲವು ದಾರಿಯನ್ನು ತೋರಿಸುತ್ತದೆ ಎಂದು ಶ್ರೀ ಗೀತಾ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಕೆ.ಎಸ್.ಮಹದೇವೇಗೌಡ ಹೇಳಿದರು.

ಇಲ್ಲಿನ ಶಂಕರನಗರದಲ್ಲಿರುವ ಶ್ರೀ ಗೀತಾ ವಿದ್ಯಾಸಂಸ್ಥೆಯ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಸಮವಸ, ನೋಟ್ ಪುಸ್ತಕಗಳ ಉಚಿತ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡಬೇಕಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಸಂಸ್ಕಾರ ಇಲ್ಲದಿದ್ದರೆ ಉತ್ತಮ ಪ್ರಜೆಯಾಗಲು ಸಾಧ್ಯವಿಲ್ಲ ಎಂದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ವೈ.ಜೆ.ಮೀನಾಕ್ಷಿ ಪುಟ್ಟಸ್ವಾಮಿ ಮಾತನಾಡಿ, ಸ್ಥಳೀಯ ಶಾಲೆ ಅಭಿವೃದ್ದಿಗೆ ಶ್ರಮಿಸುತ್ತೇವೆ. ಇದಕ್ಕೆ ನಗರಸಭೆ ಮತ್ತು ನಮ್ಮ ವೈಯಕ್ತಿಕವಾಗಿ ಸಹಾಯ ಮಾಡಲು ಸದಾ ಸಿದ್ದ. ಶಾಲೆಯಲ್ಲಿ ಉತ್ತಮ ಶೌಚಗೃಹ ನಿರ್ಮಾಣವಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಕೊಡಲಾಗಿದೆ. ಮತ್ತಷ್ಟು ಅಭಿವೃದ್ದಿಗೆ ಆಧ್ಯತೆ ನೀಡಲಾಗುವುದು ಎಂದರು.

ಬಿಜೆಪಿ ಯುವ ಮುಖಂಡ ಎಂ.ಚಾಮರಾಜು, ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಬಿ.ಶ್ರೀಕಂಠಯ್ಯ, ನಿರ್ದೇಶಕ ಆನಂದ್, ಗೌರವ ಕಾರ್ಯದರ್ಶಿ ಕೆ.ಎಸ್.ಬಸವರಾಜು, ಮುಖ್ಯಶಿಕ್ಷಕ ಎಂ.ಡಿ.ದಿನೇಶ್, ಸಹಶಿಕ್ಷಕ ಸಿ.ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕ ಪಿ.ಪ್ರಸನ್ನ, ಶಿಕ್ಷಕರಾದ ಎಂ.ಆರ್.ಸರಿತಾ, ಎಂ.ಎಚ್.ಕಲ್ಲಪ್ಪ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಲಿಖಿತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net