ವಿದ್ಯಾರ್ಥಿ ಸಂಘ ಉದ್ಘಾಟನೆ, ಅಭಿನಂದನೆ

New Project (25)
Published on

ಮೂಡುಬಿದಿರೆ: ಅಳಿಯೂರು ಪದವಿ ಪೂರ್ವ ಕಾಲೇಜು ವಿಧ್ಯಾರ್ಥಿ ಸಂಫದ ಉದ್ಘಾಟನೆ, ಶೇ.100 ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಶ್ರಮಿಸಿದ ಉಪನ್ಯಾಸಕರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಿತು.

ಶಾಸಕ ಉಮಾನಾಥ ಎ.ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಕಬಡ್ಡಿ ತೀರ್ಪುಗಾರರಾಗಿ ಆಯ್ಕೆಯಾದ ಕಾಲೇಜಿನ ಅತಿಥಿ ದೈಹಿಕ ಶಿಕ್ಷಣ ಶಿಕ್ಷಕ ಭಾಸ್ಕರ್ ಅವರನ್ನು ಅಭಿನಂದಿಸಲಾಯಿತು. ವರ್ಗಾವಣೆಗೊಂಡ ಉಪನ್ಯಾಸಕರನ್ನು ಅಭಿನಂದಿಸಿ, ನೂತನ ಉಪನ್ಯಾಸಕರನ್ನು ಸ್ವಾಗತಿಸಲಾಯಿತು.

ದಾನಿಗಳಾದ ರಮಾನಂದ ಸಾಲ್ಯಾನ್, ಹೇಮಾ ಕೆ.ಪೂಜಾರಿ, ದರೆಗುಡ್ಡೆ ಗ್ರಾಪಂ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಪ್ರಾಂಶುಪಾಲ ಚಂದ್ರಶೇಖರ್, ಪ್ರೌಢಶಾಲೆ ಮುಖ್ಯ ಶಿಕ್ಷಕ ಚಿನ್ಮಾಯನಂದ ಮೂರ್ತಿ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ನಮಿತಾ ಜೈನ್ ಉಪಸ್ಥಿತರಿದ್ದರು.

ಮಮತಾ ಸ್ವಾಗತಿಸಿದರು. ಶಾರದ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net