ಪ್ರವಾಸಕ್ಕೆ ಹೋದ ಮೂವರು ಮಕ್ಕಳು ಜೀವವನ್ನೇ ಕಳೆದುಕೊಂಡರು; ಕೆರೆಯಲ್ಲಿ ಈಜಾಡಲು ಹೋಗಿದ್ದೇ ಅವಘಡಕ್ಕೆ ಕಾರಣವಾಯ್ತು

Death In Water 31 Dec 19
Published on

ಕಲಬುರಗಿ: ಕೆರೆಯಲ್ಲಿ ಈಜಾಡಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಕಮಲಾಪುರ ತಾಲೂಕಿನ ಬೆಳಕೋಟಾದಲ್ಲಿ ನಡೆದಿದೆ.

ಈ ಮೂವರು ಮಕ್ಕಳು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸತ್ಯಸಾಯಿ ಶಾಲೆಯವರು ಎಂದು ಗುರುತಿಸಲಾಗಿದೆ. ಅಲ್ಲಿನ ಮಕ್ಕಳು ಕಲಬುರಗಿ ಜಿಲ್ಲೆಯ ಕಮಲಾಪುರದ ಸತ್ಯಸಾಯಿ ಶಾಲೆಗ ಟ್ರಿಪ್​​ಗೆ ಬಂದಿದ್ದರು.  ಅವರಲ್ಲಿ ಈ  ಮೂವರು ಮಕ್ಕಳು ಶಾಲಾಪ್ರವಾಸ ಮುಗಿಸಿಕೊಂಡು ಈಜಾಡಿಕೊಂಡು ಬರಲೆಂದು ಬೆಳಕೋಟಾ ಕೆರೆಗೆ ತೆರಳಿದ್ದರು.

ಮೃತಪಟ್ಟವರಲ್ಲಿ ಇಬ್ಬರು 9ನೇ ತರಗತಿ ವಿದ್ಯಾರ್ಥಿಗಳು ಹಾಗೂ ಓರ್ವ 8 ನೇ ತರಗತಿ ವಿದ್ಯಾರ್ಥಿ.

ಕಮಲಾಪುರ‌ ಪೊಲೀಸರು‌ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net