ತಂಗಿಗೆ ಐಸ್‌ಕ್ರೀಂ ಯಾಕೆ ತರಲಿಲ್ಲ ಎಂದು ಬೈದಿದ್ದಕ್ಕೆ ನೇಣಿಗೆ ಶರಣಾದ ಬಾಲಕ

suicide
Published on

ಬಂಟ್ವಾಳ: ಶಂಭೂರು ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿಯೋರ್ವ ಮನೆಯಲ್ಲಿ ಬೈದರು ಎಂಬ ಕಾರಣಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬಾಳ್ತಿಲ ಗ್ರಾಮದ ಚೆರ್ಕಳದ ನಿವಾಸಿ ಹರ್ಷಿತ್ (14) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಜಾತ್ರೆಯಿಂದ ಮನೆಗೆ ತಡವಾಗಿ ಬಂದಿರುವುದಲ್ಲದೆ ತಂಗಿಗೆ ಐಸ್‌ಕ್ರೀಂ ತಂದಿರಲಿಲ್ಲ ಎಂಬ ಕಾರಣಕ್ಕೆ ಮನೆಯಲ್ಲಿ ಬೈದಿದ್ದರು.

ಇದರಿಂದ ನೊಂದ ಬಾಲಕ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದಾನೆ. ಈತ ಈ ಹಿಂದೆಯೂ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಎನ್ನಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net