ಜೊಯಿಡಾ ಬಿಇಒ ಕಚೇರಿಯ ಎದುರು ಮಕ್ಕಳ ಧರಣಿ

STUDENT STRIKE
Published on

ಜೊಯಿಡಾ: ಅವುರ್ಲಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಯಂ ಶೀಕ್ಷಕರನ್ನ ನೇಮಕ ಮಾಡುವಂತೆ ವಿದ್ಯಾರ್ಥಿಗಳು, ಪಾಲಕರು ಬಿಇಒ ಕಚೇರಿಯ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಮನವಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಸಿಟ್ಟಿಗೆಧದ ಅವುರ್ಲಿ ಊರ ನಾಗರಿಕರು ಮತ್ತು ಎಸ್.ಡಿ.ಎಂ.ಸಿ.ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಹಲವಾರು ಬಾರಿ ಕಾಯಂ ಶೀಕ್ಷಕರನ್ನು ನಿಯೋಜಿಸುವಂತೆ ಮನವಿ ಬಿಇಒ ಅವರಿಗೆ, ತಹಸೀಲ್ದಾರರಿಗೆ ಅರ್ಜಿ ನೀಡಿದರೂ ಇದುವರೆಗೆ ಈ ಬಗ್ಗೆ ಯಾವುದೇ ಉತ್ತರ ನಮಗೆ ತಿಳಿಸಿಲ್ಲ. ಇಂದು ಪ್ರತಿಭಟನೆ ನಡೆಸಿದರು ಬಿಇಒ ಸ್ಥಳಕ್ಕಾಗಮಿಸದ ಬಗ್ಗೆ ಅಸಮಾಧಾನ ಹೊರ ಹಾಕಿ ಘೋಷಣೆಗಳನ್ನು ಕೂಗಿದರು

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net