ಕಾಲೇಜಿನೊಳಗೆ ಚಾಕು ಇರಿತ! ಸ್ಥಳದಲ್ಲೇ ವಿದ್ಯಾರ್ಥಿ ಸಾವು…

Crime
Published on

ಬೆಂಗಳೂರು: ಇಲ್ಲೊಂದು ಕಾಲೇಜಿನಲ್ಲೇ ವಿದ್ಯಾರ್ಥಿ ಭೀಕರವಾಗಿ ಕೊಲೆಯಾಗಿ ಹೋಗಿದ್ದಾನೆ. ಈ ಭೀಕರ ಘಟನೆ ನಡೆದದ್ದು ಬಾಗಲೂರು ಠಾಣಾ ವ್ಯಾಪ್ತಿಯ ರೇವಾ ಕಾಲೇಜಿನಲ್ಲಿ.

ಆಗಿದ್ದೇನು?

ಕಾಲೇಜಿನಲ್ಲಿಯೇ ವಿದ್ಯಾರ್ಥಿಯ ಭೀಕರ ಕೊಲೆ ನಡೆದದ್ದು ಫೆಸ್ಟ್​ ಒಂದರಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ನಡೆದ ಜಗಳದಿಂದಾಗಿ. ಈ ಗಲಾಟೆಯಲ್ಲಿ ಓರ್ವ ಕಾಲೇಜು ವಿದ್ಯಾರ್ಥಿ ಹತ್ಯೆಯಾಗಿ ಹೋಗಿದ್ದಾನೆ.

ಸ್ಥಳದಲ್ಲೇ ಸಾವು!

ನಿನ್ನೆ ರಾತ್ರಿ ನಡೆದಿರುವ ಘಟನೆ ಈ ಘಟನೆಯಲ್ಲಿ ಗುಜರಾತ್ ಮೂಲದ ಭಾಸ್ಕರ್ ಜೆಟ್ಟಿ (22) ಕೊಲೆಯಾಗಿದ್ದಾನೆ. ಈತ ನಗರದ ಖಾಸಗಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುತ್ತಿದ್ದ.

ಕಾಲೇಜು ಫೆಸ್ಟ್ ವೇಳೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು. ಈ ವೇಳೆ ಭಾಸ್ಕರ್​ಗೆ ಚಾಕುವಿನಿಂದ ಇನ್ನೊಂದು ಗುಂಪು ಇರಿದಿದೆ. ಚಾಕು ಇರಿತದ ಭೀಕರತೆಗೆ ಸ್ಥಳದಲ್ಲೇ ವಿದ್ಯಾರ್ಥಿ ಭಾಸ್ಕರ್ ಜೆಟ್ಟಿ ಸಾವನ್ನಪ್ಪಿದ್ದಾನೆ. ಸದ್ಯ ಬಾಗಲೂರು ಪೊಲೀಸರು ಕಾಲೇಜು ಸಿಸಿಟಿವಿ ಪರಿಶೀಲಿಸುತ್ತಿದ್ದು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net